ಮಂಡಿ ಜಿಲ್ಲೆಯ ತರ್ನಾಬೆಟ್ಟದ ಮೇಲೆ ತರ್ನಾ ದೇಗುಲ ನೆಲೆಸಿದೆ. ಇದೊಂದು ಜನಪ್ರಿಯ ಪ್ರವಾಸಿ ತಾಣ ಕೂಡ ಹೌದು. ಹಿಂದು ದೇವತೆ ಪಾರ್ವತಿಯ ಅವತಾರವಾದ ಶ್ಯಾಮ ಕಾಳಿಯ ಆಲಯ ಇದಾಗಿದೆ. ಈ ದೇಗುಲವನ್ನು 17ನೇ ಶತಮಾನದಲ್ಲಿ ಅರಸು ಶ್ಯಾಮಸೇನ ನಿರ್ಮಿಸಿದ. ಇದರಿಂದಲೇ ಇದು ಶ್ಯಾಮಕಾಳಿ ದೇಗುಲ ಅಂತಲೂ ಪ್ರಸಿದ್ಧಿಯಾಗಿದೆ. ಮುಖ್ಯ ಬಜಾರ್‌ನಿಂದ ಇಲ್ಲಿ ತಲುಪಲು 305 ಮೆಟ್ಟಿಲು ಏರಿ ಬರಬೇಕು. ಇಲ್ಲಿ ಹಿಂದು ದೇವರುಗಳು, ಗುರುಗಳ ಆಕರ್ಷಕ ಪೇಂಟಿಂಗ್‌ಗಳು ದೇಗುಲದ ಒಳಗೆ ಗಮನ ಸೆಳೆಯುತ್ತವೆ.


Click it and Unblock the Notifications