ಪಂಚವಕ್ತ್ರಾ ದೇಗುಲ ಸಹ ಶಿವನಿಗೆ ಮೀಸಲಾಗಿದೆ. ಇದು ಭಾರತೀಯ ಸರ್ವೇಕ್ಷಣಾ ಇಲಾಖೆಯಿಂದ ದೇಶದ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿದೆ. ಇದು ಶಿಖರ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಶಿವನ ವಿಶಿಷ್ಟ ಮೂರ್ತಿ ಇಲ್ಲಿದೆ. ವಿಶೇಷ ಅಂದರೆ ಈ ಶಿವನ ವಿಗ್ರಹ ಐದು ತಲೆಯನ್ನು ಹೊಂದಿದ್ದು, ಪ್ರತಿಯೊಂದೂ ಪ್ರತ್ಯೇಕ ಬಿಂಬವನ್ನು ಹೊಂದಿವೆ. ಬಿಯಸ್ ಹಾಗೂ ಸುಖೇತಿ ನದಿಯ ದಡದಲ್ಲಿ ಈ ದೇಗುಲ ಇದೆ. ಅತ್ಯಂತ ಆಕರ್ಷಕ ನೋಟ ಒಳಗೊಂಡ ದೇಗುವ ಅಪಾರ ಸಂಖ್ಯೆಯ ಭಕ್ತರನ್ನು ಸೆಳೆಯುತ್ತದೆ. ದೇಶದೆಲ್ಲೆಡೆಯಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.


Click it and Unblock the Notifications