ಕುಲ್ಲುವಿನ ಮಾಜಿ ರಾಜಧಾನಿಯಾದ ಜಗತ್ಸುಖ್ ಹಳ್ಳಿಯು, ಈ ಪ್ರದೇಶದಲ್ಲೆ ದೊಡ್ಡ ಹಳ್ಳಿಯಾಗಿದ್ದು, ತನ್ನಲ್ಲಿರುವ ಹಲವಾರು ಧಾರ್ಮಿಕ ಕ್ಷೇತ್ರಗಳಿಂದ ಹೆಸರುವಾಸಿಯಾಗಿದೆ. ಪ್ರಮುಖವಾಗಿ ಇಲ್ಲಿರುವ ಪುರಾತನ ಶಿವ ದೇವಾಲಯದಿಂದಾಗಿ ಈ ಪ್ರದೇಶ ಜನಪ್ರಿಯವಾಗಿದೆ. ಈ ದೇವಾಲಯದ ನಿರ್ಮಾಣವು ಶಿಖರ ಶೈಲಿಯ ವಾಸ್ತುಶಿಲ್ಪವನ್ನು ಅನುಸರಿಸಿದ್ದು, ಚಪ್ಪಟೆಯಾದ ಪಿರಮಿಡ್ ಆಕೃತಿಯನ್ನು ಹೊಂದಿದೆ.
ಇದರ ಆವರಣದಲ್ಲೆ ಚಿಕ್ಕದಾದ ಮತ್ತೊಂದು ದೇಗುಲವಿದ್ದು, ಹಿಂದು ದೇವತೆಯಾದ ಸಂಧ್ಯಾ ದೇವಿಗೆ ಸಮರ್ಪಿತವಾಗಿದೆ. ಇದಲ್ಲದೆ, ಶರ್ವಲಿ ದೇವಿ ದೇವಸ್ಥಾನ ಮತ್ತು ಗೌರಿಶಂಕರರ ಸನ್ನಿಧಿಗಳನ್ನೂ ಕಾಣಬಹುದಾಗಿದೆ. ಈ ಎಲ್ಲ ದೇಗುಲಗಳ ವಿಶೇಷತೆಯೆಂದರೆ ಶಿಖರ ಶೈಲಿಯಿರುವ ತ್ರಿ-ರಥ ಗರ್ಭ ಗೃಹ. ಇವುಗಳು 8ನೇ ಶತಮಾನದಲ್ಲಿ ನಿರ್ಮಿತವಾದವುಗಳು ಎನ್ನಲಾಗಿದೆ.


Click it and Unblock the Notifications