ಡ್ಯೂಕ್ಸ್ ನೋಸ್ ಎಂಬ ಹೆಸರು ಬಂದಿದ್ದು ಡ್ಯೂಕ್ ವೆಲ್ಲಿಂಗ್‌ಟನ್‌ರ ಮೂಗಿನಿಂದಾಗಿ. ಖಂಡಾಲದ ರೀತಿಯಲ್ಲೇ ಇದು ಅತ್ಯಂತ ಕಡಿದಾದ ಹಾದಿ. ಇದು ಹಾವಿನ ತಲೆಯ ರೀತಿಯಿದೆ. ಹೀಗಾಗಿಯೇ ಇದನ್ನು ನಾಗ್‌ಫಣಿ ಎಂದೂ ಕರೆಯಲಾಗಿತ್ತು. (ನಾಗ ಎಂದರೆ ಹಾವು, ಫಣಿ ಎಂದರೆ ತಲೆ ಎಂದರ್ಥ).
ಇಲ್ಲಿ ಚಾರಣ ಮಾಡುವುದು ಸುಲಭವಲ್ಲ. ಆದರೆ, ಕಷ್ಟ ಪಟ್ಟು ಮೇಲೆ ಹತ್ತಿದ ಮೇಲೆ ನಿಮ್ಮ ಸುಸ್ತು ಹೊಡೆದೋಡಿಸುವಂತಹ ನೋಟ ಕಾಣುತ್ತದೆ. ಇಲ್ಲಿಂದ ನೀವು ಕೆಳಭಾಗವನ್ನು ನೋಡಿದರೆ ಆ ದೃಶ್ಯವನ್ನು ಜೀವನದಲ್ಲಿ ಎಂದೂ ಮರೆಯಲಾರಿರಿ.


Click it and Unblock the Notifications