ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಥಾರ್ ಮರುಭೂಮಿಯಲ್ಲಿರುವ ಋತುಮಾನದ ಜವುಗು ಭೂಮಿಯೇ ಗ್ರೇಟರ್ ರಣ್. ಇದು ವಿಶ್ವದ ಅತೀ ದೊಡ್ಡ ಉಪ್ಪಿನ ಮರುಭೂಮಿ. ಗ್ರೇಟರ್ ರಣ್ ಸುಮಾರು 7505 ಕಿ.ಮೀ.ರನ್ನು ವ್ಯಾಪಿಸಿದೆ ಮತ್ತು ಕಛ್ ನ ಲಿಟ್ಲ್ ರಣ್ ಗೆ ಹೋಲಿಸಿದರೆ ಇದು ತುಂಬಾ ದೊಡ್ಡರು. ಇದು ಹಲವಾರು ವಿವಿಧ ಸಸ್ಯರಾಶಿ ಮತ್ತು ಪ್ರಾಣಿಸಂಕುಲಗಳಿಗೆ ನೆಲೆಯಾಗಿದೆ. ಬದಲಾಗುವ ಹವಾಮಾನ ಪರಿಸ್ಥಿತಿಯಲ್ಲಿ ಹಲವಾರು ರೀತಿಯ ವಲಸೆ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ.