ಛರಿ ಧಂದ್ ರಕ್ಷಣಾ ಮೀಸಲು ಬನ್ನಿ ಒಣ ಹುಲ್ಲುಗಾವಲು ಮತ್ತು ಕಛ್ ನ ರಣ್ ನಲ್ಲಿರುವ ಲವಣಾಂಶವಿರುವ ಜವುಗು ಭೂಮಿಯಲ್ಲಿ ಸ್ಥಾಪಿತವಾಗಿರುವ ಕಾನೂನಾತ್ಮಕವಾಗಿ ರಕ್ಷಿಸಲ್ಪಟ್ಟಿರುವಂತಹ ರಕ್ಷಣಾ ಮೀಸಲು. ಛರಿ ಎಂದರೆ `ಉಪ್ಪಿನ ಪ್ರಭಾವ' ಮತ್ತು ಧಂದ್ ಎಂದರೆ `ಆಳವಿಲ್ಲದ ಜವುಗು ಪ್ರದೇಶ' ಎಂದರ್ಥ. ಸಮೀಪದಲ್ಲಿರುವ ನದಿಯ ನೀರು ಮಳೆಗಾಲದಲ್ಲಿ ಹರಿದು ಬಂದರೆ ಈ ಜವುಗು ಪ್ರದೇಶವು ತೇವಾಂಶಭರಿತವಾಗುತ್ತದೆ. ಈ ಮೀಸಲು ಸುಮಾರು 80 ಕಿ.ಮೀ. ವ್ಯಾಪ್ತಿಯಲ್ಲಿದೆ.
ಛರಿ ಧಂದ್ ನಲ್ಲಿ ರಾಪ್ಟರ್ ಗಳು, ನೀರಿನ ಕೀಟಗಳು, ನಡೆದಾಡುವ ನೀರ ಹಕ್ಕಿಗಳು ಮತ್ತು ನೆಲಗುಬ್ಬಿಗಳ ಸಹಿತ ಸುಮಾರು 370 ಜಾತಿಯ ಪಕ್ಷಿಗಳನ್ನು ವೀಕ್ಷಿಸಬಹುದಾಗಿರುವುದರಿಂದ ಇದು ಪಕ್ಷಿಪ್ರಿಯರು ಮತ್ತು ಪಕ್ಷಿವಿಜ್ಞಾನಿಗಳಿಗೆ ಸ್ವರ್ಗ.


Click it and Unblock the Notifications