Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಧ್ವನಿ ಮತ್ತು ಬೆಳಕಿನ ಪ್ರದರ್ಶನ

ಧ್ವನಿ ಮತ್ತು ಬೆಳಕಿನ ಪ್ರದರ್ಶನ, ಕುರುಕ್ಷೇತ್ರ

1

ಹರಿಯಾಣ ರಾಜ್ಯ ಸರ್ಕಾರವು ಕುರುಕ್ಷೇತ್ರ ಪ್ರಾಂತ್ಯದಲ್ಲಿ ಹಲವಾರು ಧ್ವನಿ ಮತ್ತು ಬೆಳಕಿನ ಪ್ರದರ್ಶನಗಳನ್ನು ನಡೆಸುತ್ತದೆ. ಇವು ಆ ಪ್ರವಾಸಿ ತಾಣಗಳ ಮಹತ್ವವನ್ನು ಸಾರಿ ಹೇಳುತ್ತವೆ. ಶ್ರೀ ಕೃಷ್ಣ ವಸ್ತು ಸಂಗ್ರಹಾಲಯ ಮತ್ತು ಜ್ಯೋತಿಸರದಲ್ಲಿ ಗೀತಾ ಗ್ಯಾನ್ ಎಂಬ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಈ ಸ್ಥಳವನ್ನು ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಅವಧಿಯಲ್ಲಿ ಗುರುತಿಸಿದರಂತೆ. ಇವರು ಹಿಮಾಲಯಕ್ಕೆ ಧ್ಯಾನ ಮಾಡಲು ಹೋಗುವಾಗ ಇದನ್ನು ಕಂಡು ಹಿಡಿದರಂತೆ.

ಈ ಪ್ರದರ್ಶನವು ಪ್ರತಿದಿನ ಸಂಜೆ ಜ್ಯೋತಿಸರದಲ್ಲಿ ನಡೆಯುತ್ತದೆ. ಈ ಪ್ರದರ್ಶನದಲ್ಲಿ ಕುದುರೆಗಳನ್ನು ಕಟ್ಟಿರುವ ರಥವನ್ನು ಹಿಂದೆ ಹೊಂದಿರುವ, ಅದರ ಮುಂದೆ ಸುದರ್ಶನ ಚಕ್ರವನ್ನು ಹಿಡಿದು ನಿಂತು ಗೀತೆಯನ್ನು ಬೋಧಿಸುತ್ತಿರುವ ಶ್ರೀಕೃಷ್ಣ ಹಾಗು ಆತನ ಮುಂದೆ ಭಕ್ತಿ ಪೂರ್ವಕವಾಗಿ ಮಂಡಿಯೂರಿ ಕುಳಿತು ಕೇಳುತ್ತಿರುವ ಅರ್ಜುನನ ವಿಶ್ವವಿಖ್ಯಾತ ಮೂರ್ತಿಯನ್ನು ಸಹ ನಾವು ಕಾಣಬಹುದು.

ಈ ಅದ್ವಿತೀಯವಾದ ವಿಗ್ರಹವನ್ನು 1967ರಲ್ಲಿ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರು ಒಂದು ಎತ್ತರವಾದ ವೇದಿಕೆಯ ಮೇಲೆ ನಿರ್ಮಿಸಿದರು.

ಈ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಮಹಾಭಾರತದ ಘಟನೆಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ ಶ್ರೀ ಕೃಷ್ಣನ ಬೋಧನೆಗಳನ್ನು ಹಿಂದಿ ಮತ್ತು ಇಂಗ್ಲೀಷಿನಲ್ಲಿ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed