ಸುಬ್ರಹ್ಮಣ್ಯದಲ್ಲಿ ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳಲ್ಲಿ ಬಿಲದ್ವಾರ ಗುಹೆಯು ಒಂದಾಗಿದೆ. ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ಹಾದಿಯಲ್ಲಿದೆ. ದಂತಕಥೆಗಳ ಪ್ರಕಾರ ನಾಗಗಳ ರಾಜನಾದ ವಾಸುಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನು ತಾನು ಕಾಪಾಡಿ ಕೊಳ್ಳಲು, ಈ ಗುಹೆಗೆ ಬಂದು ಅವಿತುಕೊಂಡನೆಂದು ಹಾಗು ತನ್ನನ್ನು ತಾನು ಶಿಕ್ಷಿಸಿಕೊಂಡನೆಂದು ಹೇಳಲಾಗಿದೆ. ಈ ಗುಹೆಯು ನೈಸರ್ಗಿಕವಾಗಿ ನಿರ್ಮಾಣಗೊಂಡ ಪ್ರವೇಶ ಮತ್ತು ನಿರ್ಗಮ ದ್ವಾರವನ್ನು ಹೊಂದಿದೆ. ಇದು 10ಮೀಟರ್ ಉದ್ದ ಮತ್ತು 30 ಅಡಿ ಆಳವಿದೆ. ಇದರ ಸುತ್ತಲು ಸುಂದರ ಉದ್ಯಾನವನವಿದೆ. ವಾಸುಕಿಯ ಆಶೀರ್ವಾದಗಳನ್ನು ಪಡೆಯುವ ಸಲುವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications