Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಕೊವಲಂ ಜಾಮಾ ಮಸೀದಿ

ಕೊವಲಂ ಜಾಮಾ ಮಸೀದಿ, ಕೊವಲಂ

1

ಕೊವಲಂ ನಗರದ ಮತ್ತೊಂದು ಪ್ರಸಿದ್ಧ ಕಡಲ ತೀರವಾದ ಅಶೋಕ ಬೀಚ್ ತೀರದಲ್ಲಿ ಸ್ಥಾಪಿಸಲ್ಪಟ್ಟಿದೆ ಜಾಮಾ ಮಸೀದಿ. ಚಿಕ್ಕದಾದ ಈ ಮಸೀದಿ ಹಿಂದೂ ಗಣೇಶ ದೇವಸ್ಥಾವದ ನೇರ ಎದುರಿನಲ್ಲಿದೆ. ಸಮುದ್ರದ ತೀರದಲ್ಲಿ ನಿರ್ಮಾಣವಾದ ಈ ಮಸೀದಿ ದೇವಾಲಯದ ಎದುರಿಗೆ ಕಟ್ಟಲಾಗಿದ್ದು ಧಾರ್ಮಿಕ ವೈವಿದ್ಯತೆಯನ್ನು ಮೆರೆಯುತ್ತಿದೆ. ಅಶೋಕ ಬೀಚ್ ನ ಬಳಿ ಕಟ್ಟಲಾಗಿರುವ  ಜಾಮಾ ಮಸೀದಿ ಅದನ್ನು ಕಟ್ಟುವಾಗ ಬಳಸಿದ ಕಲಾಕೃತಿಗಳನ್ನು ಅತ್ಯಂತ ಆಶ್ಚರ್ಯವನ್ನುಂಟುಮಾಡುವಂತೆ ರಚಿಸಲಾಗಿದೆ. ಇದು ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತದೆ.

ಸಮುದ್ರದ ವಲಯದಲ್ಲಿ ಸ್ಥಾಪಿಸಲಾಗಿದುವ ಈ ಮಸೀದಿಯ ಮೇಲೆ ಕೆತ್ತಲಾಗಿರುವ ಕಲಾಕೃತಿಗಳು ನೋಡುಗರ ಮನ ತಣಿಸುತ್ತವೆ. ಈ ಸೌಂದರ್ಯವನ್ನು ಭೇಟಿಯಿತ್ತ ಎಲ್ಲರೂ ಆನಂದಿಸಬಹುದು. ಮಸೀದಿಯ ಹತ್ತಿರದಲ್ಲಿಯೇ ಲೈಟ್ ಹೌಸ್ ಹಾಗೂ ವಿಸ್ತಾರವಾದ ಮರಳು ದಿಣ್ಣೆಗಳನ್ನು ಹೊತ್ತು ನಿಂತಿರುವ ಹವಾ ಬೀಚ್ ಕಾಣಲು ಸಿಗುತ್ತದೆ. ಅತ್ಯಂತ ಪುರಾತನವಾದ ಈ ಬೀಚ್ ಗಳ ಸುತ್ತಲಿನ ಸೊಬಗಿನೊಂದಿಗೆ ಈ ಪರಿಸರದಲ್ಲೇ ನಿರ್ಮಿಸಲಾಗಿರುವ ಜಾಮಾ ಮಸೀದಿ ನೋಡುಗರಿಗೆ ಖುಷಿಕೊಡುತ್ತದೆಯಲ್ಲದೆ ಇಲ್ಲಿಗೆ ಭೇಟಿ ನಿಡುವುದು ಹೆಚ್ಚು ಮೌಲ್ಯಯುತ ಎನಿಸುವುದರಲ್ಲಿ ಸಂಶಯವಿಲ್ಲ. ಜಾಮಾ ಮಸೀದಿಯು ಕೊವಲಂ ಹೃದಯ ಭಾಗದಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿದ್ದು ರಸ್ತೆಯ ಮೂಲಕ ಇಲ್ಲಿಗೆ ಬರುವ ವ್ಯವಸ್ಥೆಯಿದ್ದು ಅತ್ಯಂತ ಸುಲಭವಾಗಿ ಇಲ್ಲಿಗೆ ಬರಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed