Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ಸುಬ್ರಹ್ಮಣ್ಯಸ್ವಾಮಿ ದೇವಾಲಯ

ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಕೊಟ್ಟಾಯಂ

1

ಕೊಟ್ಟಾಯಂನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಚಂಗನಾಚೆರೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿದೆ. ಕೇರಳಾದಲ್ಲಿರುವ ಕೆಲವೇ ಕೆಲವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಇದೂ ಒಂದು. ಕ್ರಿ.ಶ.733 ರಲ್ಲಿ ಈ ದೇವಾಲಯ ನಿರ್ಮಿಸಿರುವ ಇತಿಹಾಸವಿದೆ. ಯಾವುದೇ ಕುಲ-ಜಾತಿ, ಧರ್ಮ ಹಾಗೂ ಬಣ್ಣದ ಅಡೆತಡೆ ಇಲ್ಲದೆ ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಭಾರತದ ಮೊದಲ ದೇವಾಲಯ ಎಂಬ ಕೀರ್ತಿ ಇದಕ್ಕಿದೆ. ದೇವಾಲಯದ ಒಳಭಾಗದಲ್ಲಿರುವ ವಿಗ್ರಹ ಸುಮಾರು 6 ಅಡಿ ಎತ್ತರವಿದೆ. ಅದಕ್ಕಿಂತಲೂ ಹೆಚ್ಚಾಗಿ ಸುಬ್ರಹ್ಮಣ್ಯ ದೇವರು ಕೈಯಲ್ಲಿ ಹಿಡಿದಿರುವ 'ವೇಲ್' ಅಥವಾ ಈಟಿ ಆಕಾಶದ ಕಡೆಗೆ ತೋರಿಸುವ ಬದಲು ಭೂಮಿಯ ಕಡೆಗೆ ಗುರಿಯನ್ನು ಹೊಂದಿದೆ.

ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ 'ಪಲ್ಲಿಮಟ್ಟ ಉತ್ಸವ' ನಡೆಯುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ನ ಧನುರ್ ಮಾಸದಲ್ಲಿ ಸುಮಾರು 10 ದಿನಗಳ ಕಾಲ ಈ ಉತ್ಸವ ನಡೆಯುತ್ತದೆ. ಚಕ್ಕಿಯಾರ್ಕೂಟ ಇಲ್ಲಿನ ಪ್ರಮುಖ ಆಕರ್ಷಣೆ. 'ಉರಜ್ಮಾ' ದೇವಾಸಂ ಮಂಡಳಿಯ ವತಿಯಿಂದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ನಿರ್ವಹಣೆ ನಡೆಯುತ್ತದೆ. ಅತ್ಯಂತ ಪುರಾತನ ದೇವಾಲಯವಾಗಿರುವುದರಿಂದ ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun