ಕೊಟ್ಟಾಯಂನಿಂದ ಕೇವಲ 2 ಕಿ.ಮೀ.ದೂರದಲ್ಲಿ ಸೇಂಟ್ ಮೇರಿಸ್ ಆರ್ಥೊಡಾಕ್ಸ್ ಚರ್ಚ್ ಇದೆ. 1579ರಲ್ಲಿ ತೇಕುಂಕೂರ್ ಮಹಾರಾಜರು ಈ ಚರ್ಚ್ ನಿರ್ಮಿಸಿದರು. ಇದು ಆರ್ಥೊಡಾಕ್ಸ್ ಸಿರಿಯನ್ ಚರ್ಚ್. ಇದು ಕೇರಳ ಹಾಗೂ ಪೋರ್ಚುಗೀಸರ ಶೈಲಿಯ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿದೆ. ಚರ್ಚ್ ನ ಗೋಡೆಗಳು ದೇಶಿಯ ಹಾಗೂ ಪಾಶ್ಚಾತ್ಯ ಶೈಲಿಯ ಮ್ಯೂರಲ್ ಪೇಂಟಿಂಗ್ ಗಳಿಂದ ಅಲಂಕೃತಗೊಂಡಿದ್ದು ಇದರಲ್ಲಿವ ಸತ್ಯವೇದ ಹಾಗೂ ಐತಿಹಾಸಿಕ ಬಣ್ಣದ ಚಿತ್ರಗಳು ಎಲ್ಲರನ್ನು ಆಕರ್ಷಿಸುತ್ತದೆ.
ಪ್ರತೀವರ್ಷ ಈ ಚರ್ಚ್ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೀವು ಕಲಾ ಆರಾಧಕರಾಗಿದ್ದರೆ ಈ ಚರ್ಚ್ ಗೆ ಭೇಟಿ ನೀಡಲೇ ಬೇಕು. ಅತ್ಯಂತ ಸುಂದರವಾದ ಕಲಾಕೃತಿಗಳು ಹಾಗೂ ಮ್ಯೂರಲ್ ಪೇಂಟಿಂಗ್ಸ್ ಗಳಿಗೆ ನೀವು ಮನಸೋಲದೆ ಇರಲಾರಿರಿ.


Click it and Unblock the Notifications