ಕೊಟ್ಟಾಯಂ ಜಿಲ್ಲೆಯಲ್ಲಿರುವ ಮತ್ತೊಂದು ಸುಂದರ ಪುಟ್ಟ ಗ್ರಾಮ ಪನ್ನಾಚಿಕಾಡು. ಚಂಗನಸರಿ ಹಾಗೂ ಕೊಟ್ಟಾಯಂ ನಡುವಿನ ಪ್ರಮುಖ ರಸ್ತೆಯಲ್ಲೇ ಈ ಗ್ರಾಮ ಇದೆ. ಕೊಟ್ಟಾಯಂನಿಂದ ಸುಮಾರು 11 ಕಿ.ಮೀ.ದೂರದಲ್ಲಿದೆ. ಇಲ್ಲಿರುವ ಸರಸ್ವತಿ ದೇವಾಲಯ ಹೆಚ್ಚು ಜನಪ್ರಿಯವಾದ್ದು. ಈ ದೇವಾಲಯವನ್ನು 'ದಕ್ಷಿಣ ಮೂಕಾಂಬೆ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವರ್ಷವಿಡೀ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಇರುವುದು ಇಲ್ಲಿನ ವಿಶೇಷವಾಗಿದೆ. ಇಲ್ಲಿನ ವಿಶಾಲವಾದ ಪ್ರಕೃತಿ ಸೌಂದರ್ಯವೇ ಪ್ರವಾಸಿಗರಿಗೆ ಅತ್ಯಂತ ಆಕರ್ಷಣೀಯವಾಗಿದೆ. ಪ್ರಕೃತಿಯ ಮಡಿಲಲ್ಲಿ ಮೈಮನಗಳನ್ನು ಹರಡಿಕೊಳ್ಳಲು ಬಯಸುವವರು ಆಗಿಂದಾಗೆ ಇಲ್ಲಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕೆಲವು ದಿನಗಳು ನೀವು ಈ ಗ್ರಾಮದಲ್ಲಿ ನೆಲೆಸಿದರೆ ನಿಮ್ಮೆಲ್ಲಾ ಚಿಂತೆಗಳು ಮಾಯವಾಗುತ್ತವೆ. ಪನ್ನಾಚಿಕಾಡು ಛಾಯಗ್ರಾಹಕರಿಗೆ ಹೇಳಿ ಮಾಡಿಸಿರುವ ಪ್ರದೇಶ.


Click it and Unblock the Notifications