Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊರ್ಬಾ » ಆಕರ್ಷಣೆಗಳು » ಚೈತುರ್ ಗಢ್ ಕೋಟೆ

ಚೈತುರ್ ಗಢ್ ಕೋಟೆ, ಕೊರ್ಬಾ

1

ಚೈತುರ್ ಗಢ್ ಕೋಟೆಯು ಲಫಗಢ್ ಎಂದು ಸಹ ಕರೆಯಲ್ಪಡುತ್ತದೆ. ಇದು ಭಾರತದ ಪ್ರಾಕೃತಿಕ ಕೋಟೆಗಳಲ್ಲಿಯೇ ಅತ್ಯಂತ ಸದೃಢವಾದ ಕೋಟೆಗಳಲ್ಲಿ ಒಂದಾಗಿದೆ. ಇದು ಪಾಳಿಯಿಂದ 19 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಚತ್ತೀಸ್‍ಗಢ್‍ನ 36 ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆಯು ದೊಡ್ಡದಾದ ಪ್ರಾಕೃತಿಕ ಗೋಡೆಗಳನ್ನು ಹೊಂದಿದೆ. ಇದಕ್ಕೆ ಅಲ್ಲಲ್ಲಿ ಮಾತ್ರ ಕೆಲವೊಂದು ಗೋಡೆಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಕೋಟೆಯನ್ನು ಒಂದನೆ ರಾಜ ಪೃಥ್ವಿದೇವನು ನಿರ್ಮಾಣ ಮಾಡಿದನು. ಮೇನಕ, ಸಿಂಹದ್ವಾರ ಮತ್ತು ಹುಂಕಾರಗಳು ಈ ಕೋಟೆಯ ಪ್ರಮುಖ ದ್ವಾರಗಳಾಗಿವೆ.

ಮಹಿಷಾಸುರ ಮರ್ದಿನಿ ದೇವಾಲಯವು ಈ ಕೋಟೆಯ ಒಳಭಾಗದಲ್ಲಿ ನೆಲೆಗೊಂಡಿದೆ. ಇದರ ಒಳಗೆ ದುರ್ಗಾದೇವಿಯು ಹನ್ನೆರಡು ಕೈಗಳನ್ನು ಹೊಂದಿರುವ ಮಹಿಷಾಸುರ ಮರ್ದಿನಿಯ ವಿಗ್ರಹದ ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾಳೆ. ಈ ದೇವಾಲಯದಿಂದ 3 ಕಿ.ಮೀ  ದೂರದಲ್ಲಿ ಶಂಕರ ಗುಹೆಗಳು ನೆಲೆಗೊಂಡಿವೆ. ಈ ಗುಹೆಗಳು ಸುರಂಗ ಮಾರ್ಗದಂತೆ ಕಾಣುತ್ತವೆ.

ಹಚ್ಚ ಹಸಿರಿನ ಕಾಡುಗಳಿಂದ  ಸುತ್ತುವರಿದ ಐದು ಕೊಳಗಳು ಇಲ್ಲಿವೆ. ಇದರ ಸಮೀಪದಲ್ಲಿ ಹಲವಾರು ಪ್ರಾಣಿ- ಪಕ್ಷಿಗಳನ್ನು ನಾವು ವೀಕ್ಷಿಸಬಹುದು. ಈ ಸ್ಥಳದ ಪ್ರಾಕೃತಿಕ ಸೊಬಗು ವರ್ಣನಾತೀತ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed