Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಪ್ಪಳ » ಆಕರ್ಷಣೆಗಳು » ಕಿನ್ನಾಳ

ಕಿನ್ನಾಳ, ಕೊಪ್ಪಳ

1

ಕೊಪ್ಪಳ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದು ಕಿನ್ನಾಳ. ಪ್ರತಿವರ್ಷವೂ ಹಲವು ಜನರು ಕಿನ್ನಾಳಕ್ಕೆ ಭೇಟಿ ನೀಡುತ್ತಾರೆ. ಮುಖ್ಯವಾಗಿ ಕರಕುಶಲ ವಸ್ತುಗಳನ್ನು ಖರಿದಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.

ಕಿನ್ನಾಳಿನಲ್ಲಿ ಜನಸಂಖ್ಯೆಯು ತುಂಬಾ ಕಡಿಮೆಯಿದ್ದರೂ, ಸ್ಥಳೀಯರು ಪ್ರವಾಸಿಗರನ್ನು ತುಂಬು ಹೃದಯದಿಂದ ಸ್ವಾಗತಿಸುವ ರೀತಿ ಮನತುಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಕರಕುಶಲ ಸಾಮಗ್ರಿಗಳ ಜೊತೆಗೆ, ಕಿನ್ನಾಳಿನಲ್ಲಿ ಲ್ಯಾಕರ್ ಬಟ್ಟೆಗಳೂ ಜನಪ್ರಿಯ. ಇಲ್ಲಿನ ಸಾಂಪ್ರದಾಯಿಕ ಲ್ಯಾಕರ್ ಬಟ್ಟೆಗಳಿಗೆ ಭಾರಿ ಬೇಡಿಕೆಯಿದೆ. ಕಿನ್ನಾಳಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ಇಲ್ಲಿನ ಜನ ಮಡಿಕೆ ಮಾಡುವುದು, ನೇಯುವುದು, ಬಾಚಣಿಗೆ ತಯಾರಿಸುವುದು ಮತ್ತು ಇತರ ಕರಕುಶಲ ಸಾಮಗ್ರಿಗಳ ತಯಾರಿಕೆಯಲ್ಲಿ ಮಗ್ನರಾಗಿರುವುದನ್ನು ನೋಡುತ್ತೀರಿ. ಸ್ಥಳೀಯ ಕರಕುಶಲ ಸಾಮಗ್ರಿಯನ್ನು ಮಾಡುವವರು ಬೇಕಾದರೆ ಪ್ರವಾಸಿಗರಿಗೆ ಕೆಲವು ತಂತ್ರಗಳನ್ನೂ ಕೂಡಾ ಹೇಳಿಕೊಡುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ನಾಳಿಗೆ ಎಲ್ಲಾ ನಗರಗಳಿಂದಲೂ ಉತ್ತಮ ರಸ್ತೆ ಸಂಪರ್ಕವಿದೆ. ಇದು ಬೆಂಗಳೂರಿನಿಂದ 305 ಕಿ.ಮೀ ದೂರದಲ್ಲಿದೆ. ಕಿನ್ನಾಳಿಗೆ ನೀವು ಬಸ್‌ ಅಥವಾ ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಕಿನ್ನಾಳಿನಲ್ಲಿ ಕಡಿಮೆ ಬೆಲೆಯಲ್ಲಿ ಕರಕುಶಲ ಸಾಮಗ್ರಿಗಳು, ಆಟಿಗೆಗಳನ್ನು ಖರೀದಿಸಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue