ಮುನಿರಾಬಾದ್, ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದ ಗಮನ ಸೆಳೆದಿದೆ. ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಮುನಿರಾಬಾದ್ ಡ್ಯಾಮ್ ಇಲ್ಲಿ ಪ್ರೇಕ್ಷಣೀಯ ಸ್ಥಳ. ಋಷ್ಯಮೂಕ ಬೆಟ್ಟ, ಬಲಿ ಕಿಲಾ ಮತ್ತು ಪಂಪ ಸರೋವರವೂ ಕೂಡಾ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ. ಮುನಿರಾಬಾದ್‌ನಲ್ಲಿ ಭೇಟಿಕೊಡುವ ಇನ್ನೊಂದು ಪ್ರಮುಖ ಸ್ಥಳವೆಂದರೆ ಹುಲಿಗೆಮ್ಮ ದೇವಸ್ಥಾನ. ಇಲ್ಲಿ ಹುಲಿಗೆಮ್ಮ ದೇವರು ಪ್ರಮುಖ ದೇವತೆ. ದೇವಸ್ಥಾನದ ಒಳಗೆ ಸಿಕ್ಕ ಶಿಲಾಶಾಸನದ ಪ್ರಕಾರ, ಚಾಲುಕ್ಯರ ಆರನೇ ವಿಕ್ರಮಾದಿತ್ಯನಿಂದ 11ನೇ ಶತಮಾನದಲ್ಲಿ ಚತುರ್ವೇದಿ ಭಟ್ಟರಿಗೆ ಹಸ್ತಾಂತರ ಮಾಡಲಾಯಿತು ಎಂದಿದೆ.ಈ ದೇವಸ್ಥಾನಕ್ಕೆ ಭೇಟಿ ನೀಡಿದವರಿಗೆ ಮೊದಲು ಗೋಚರವಾಗುವುದು ಒಂದು ಅತಿ ದೊಡ್ಡದಾದ ಸ್ತಂಭ. ಸುಮಾರು 25 ಅಡಿ ಎತ್ತರದ ಧ್ವಜ ಸ್ತಂಭವು ಪ್ರವಾಸಿಗರ ಕಣ್ಣನ್ನು ಸೆಳೆಯುತ್ತದೆ. ಪ್ರತಿವರ್ಷ ಆಚರಿಸುವ ಒಂದು ಹಬ್ಬಕ್ಕೆ ಇಲ್ಲಿ ಸಾವಿರಾರು ಜನರು ಸೇರುತ್ತಾರೆ.ಹುಲಿಗೆಮ್ಮ ದೇವಸ್ಥಾನಕ್ಕೆ ರಸ್ತೆ ಮತ್ತು ರೈಲಿನ ಮೂಲಕ ತಲುಪಬಹುದು. ಸಮೀಪದ ಎಲ್ಲಾ ಪಟ್ಟಣ, ನಗರಗಳಿಂದಲೂ ಕೂಡಾ ಇಲ್ಲಿಗೆ ಬಸ್ ಸೇವೆಗಳು ಲಭ್ಯವಿದೆ. ಹಂಪಿಯಿಂದ ಮುನಿರಾಬಾದ್‌ಗೆ ರೈಲಿನ ಮೂಲಕ ತಲುಪಬಹುದು ಮತ್ತು ಹೊಸಪೇಟೆ ಜಂಕ್ಷನ್ ಸಮೀಪದ ರೈಲ್ವೇ ಸ್ಟೇಷನ್ ಆಗಿದೆ.


Click it and Unblock the Notifications