ಕೋಲಪುರ ’ಆದಿ ಮಹಾಲಕ್ಷ್ಮಿ’ ಎಂದು ಸಹಾ ಪ್ರಸಿದ್ಧವಾಗಿರುವ ಮೂಕಾಂಬಿಕಾ ದೇವಾಲಯವು ಕೊಲ್ಲೂರಿನ ನೋಡಲೇಬೇಕಾದ ದೇವಾಲಯವಾಗಿದೆ. ಈ ದೇವಾಲಯವು ದಟ್ಟ ಕಾಡು ಮತ್ತು ಸುಂದರ ಪರ್ವತ ಶ್ರೇಣಿಗಳ ನಡುವೆ ಮನೆಮಾಡಿಕೊಂಡಿದೆ. ಇದರ ರಚನೆಯು ಪ್ರಾಚೀನ ಹಿಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಹಾಗು ಇದು ವಾಸ್ತುಶಿಲ್ಪದ ಅದ್ಭುತವೆಂದು ಪರಿಗಣಿಸಲ್ಪಟ್ಟಿದೆ.ಈ ದೇವಾಲಯದಲ್ಲಿ ಜ್ಯೋತಿರ್ಲಿಂಗವಿದ್ದು ಅದು ಮಧ್ಯದಲ್ಲಿ ಶಕ್ತಿಯನ್ನು ಬಿಂಬಿಸುವ ಬಂಗಾರದ ಗೆರೆಯನ್ನು ಹೊಂದಿದೆ. ಮೂಕಾಂಬಿಕಾ ದೇವಿಯ ಮೂರ್ತಿಯ ಮುಂಭಾಗದಲ್ಲಿರುವ ಲಿಂಗವು ಮೂರು ಕಣ್ಣುಗಳನ್ನು ಹೊಂದಿದೆ. ಈ ಪುರಾತನ ದೇವಾಲಯವು ಒಂದು ಪವಿತ್ರ ಸಿದ್ಧಿ ಕ್ಷೇತ್ರವಾಗಿದ್ದು ತನ್ನೊಳಗೆ ಹಲವಾರು ದಂತಕತೆಗಳನ್ನು ಅಡಗಿಸಿಕೊಂಡು ಕುಳಿತಿದೆ. ನವರಾತ್ರಿ ಸಮಯದಲ್ಲಿ ಇಲ್ಲಿ ಆಚರಿಸಲ್ಪಡುವ ಸರಸ್ವತಿ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.ಯಾತ್ರಾರ್ಥಿಗಳು ಪೂಜಾ ಕೈಂಕರ್ಯಗಳನ್ನು ಸಲ್ಲಿಸುವ ಮೊದಲು ತೀರ್ಥಸ್ನಾನ ಮಾಡಿ, ಮೂಕಾಂಬಿಕಾ ದೇವಾಲಯದಲ್ಲಿನ ದೇವಿಯನ್ನು ಮತ್ತು ಲಿಂಗವನ್ನು ಪುಷ್ಪಗಳಿಂದ ಅಲಂಕರಿಸಿ ಪೂಜಿಸುತ್ತಾರೆ.


Click it and Unblock the Notifications