ಪ್ರವಾಸಿಗರು ಕೋಲಾರ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿನ ಕೋಲಾರಮ್ಮ ದೇವಾಲಯವನ್ನು ತಪ್ಪದೆ ನೋಡಬೇಕು. ಇದು ಪಾರ್ವತಿ (ಕೋಲಾರಮ್ಮ) ದೇವಿಯ ದೇವಾಲಯವಾಗಿದೆ. ಇದು L ಆಕಾರದ ದೇವಾಲಯವಾಗಿದ್ದು ದ್ರಾವಿಡ ವಿಮಾನ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇದು ಚೋಳರಿಂದ ಸ್ಥಾಪನೆಗೊಂಡಿದ್ದು ಸುಮಾರು 1000 ವರ್ಷಗಳಷ್ಟು ಹಿಂದಿನದು ಎಂದು ಭಾವಿಸಲಾಗಿದೆ.
ಮೈಸೂರಿನ ಹಿಂದಿನ ಅರಸರು ಇಲ್ಲಿನ ದೇವಿಯ ಅನುಗ್ರಹ ಪಡೆಯುವ ಸಲುವಾಗಿ ಇಲ್ಲಿಗೆ ಆಗಾಗ ಭೇಟಿಕೊಡುತ್ತಿದ್ದರಂತೆ. ಪ್ರವಾಸಿಗರು ಇಲ್ಲಿನ ದೇವಾಲಯಕ್ಕೆ ಭೇಟಿಕೊಟ್ಟ ತಕ್ಷಣ ಈ ದೇವಾಲಯದಲ್ಲಿನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಮೂರ್ತಿಗಳು ಮತ್ತು ಶಿಲ್ಪಕಲಾ ರಚನೆಗೆ ಮಾರು ಹೋಗುತ್ತಾರೆ. ಚೇಳುಗಳ ದೇವತೆಯಾದ ಚೇಳಮ್ಮ, ಕೋಲಾರಮ್ಮ ದೇವಾಲಯದಲ್ಲಿರುವ ಮತ್ತೊಂದು ದೇವತೆಯ ವಿಗ್ರಹವಾಗಿದೆ. ಸ್ಥಳೀಯರ ನಂಬಿಕೆಯಂತೆ ಚೇಳಮ್ಮನನ್ನು ಪೂಜಿಸಿದರೆ ಆಕೆ ಭಕ್ತಾಧಿಗಳನ್ನು ಚೇಳಿನ ಕಡಿತದಿಂದ ಕಾಪಾಡುತ್ತಾಳಂತೆ. ಇಲ್ಲೊಂದು ಹುಂಡಿಯಿದ್ದು ಭಕ್ತಾದಿಗಳಿಂದ ಕಾಣಿಕೆ ಸಂಗ್ರಹಿಸಲು ಇದನ್ನು ಸ್ಥಾಪಿಸಲಾಗಿದೆ. ಸಂಪ್ರದಾಯದಂತೆ ಭಕ್ತಾಧಿಗಳು ಈ ಸ್ಥಳಕ್ಕೆ ಬಂದಾಗ ಒಂದು ನಾಣ್ಯವನ್ನು ಇದರಲ್ಲಿ ಹಾಕುತ್ತಾರೆ.


Click it and Unblock the Notifications