ಅಗಸ್ತ್ಯಮುನಿ, ಕೇದಾರನಾಥ

ಮಂದಾಕಿನಿ ನದಿ ದಡದ ಮೇಲಿರುವ ಆಕರ್ಷಕ ತಾಣ ಅಗಸ್ತ್ಯಮುನಿ. ಸಮುದ್ರ ಮಟ್ಟದಿಂದ 1000 ಮೀಟರ್‌ ಎತ್ತರದಲ್ಲಿದೆ. ಈ ತಾಣವು ಜನಪ್ರಿಯ ಹಿಂದು ಸನ್ಯಾಸಿ ಅಗಸ್ತ್ಯಮುನಿಗಳಿಂದಾಗಿ ಜನಪ್ರಿಯವಾಗಿದೆ. ವರ್ಷಗಳ ಕಾಲ ಅವರು ಇಲ್ಲಿ ತಪಸ್ಸು ಮಾಡಿದ್ದರು. ಇಲ್ಲೊಂದು ದೇವಾಲಯವಿದೆ. ಇದನ್ನು ಸ್ಥಳೀಯರು ಅಗಸ್ತ್ಯೇಶ್ವರ ಮಹಾದೇವ ದೇವಾಲಯ ಎಂದು ಕರೆಯುತ್ತಾರೆ.

ಪ್ರವಾಸಿಗರು ಇಲ್ಲಿ ಬಂದಾಗ ಇಲ್ಲಿನ ದೇವಾಲಯ ಗೋಡೆಯ ಮೇಲೆ ಕೆತ್ತಿರುವ ಹಿಂದು ದೇವರುಗಳ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ದೇವಾಲಯದಲ್ಲಿ ನಾನಾ ಜಾತ್ರೆ ಆಯೋಜಿಸಲಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭದಲ್ಲಿ ಆಗಮಿಸುತ್ತಾರೆ. ಇಲ್ಲಿ ಬೈಸಾಕಿ ಉತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯವು ಭಕ್ತರು ಹಾಗೂ ಜಾತ್ರೆ ವೀಕ್ಷಣೆಗೆ ಬಂದವರಿಂದ ತುಂಬಿ ತುಳುಕುತ್ತಿರುತ್ತದೆ.

ಪ್ರವಾಸಿಗರು ಇಲ್ಲಿ ಬಂದ ಸಂದರ್ಭದಲ್ಲಿ ಮಂದಾಕಿನಿ ನದಿಯಲ್ಲಿ ಮೀನು ಹಿಡಿಯುವ ಅವಕಾಶ ಇದೆ. ದೇವಾಲಯಕ್ಕೆ ಅತ್ಯಂತ ಸಮೀಪದಲ್ಲಿಯೇ ನದಿ ಹರಿದು ಹೋಗಿದೆ. ಪವನಹನ್ಸ್‌ ಹೆಲಿಕಾಪ್ಟರ್ ಗಳ ಸೇವೆ ಈ ತಾಣಕ್ಕಿದೆ. ಇದು ಕೇದಾರನಾಥ ದೇವಾಲಯದವರೆಗೂ ತಲುಪುತ್ತದೆ. ಅಲ್ಲಿಂದ ಮುಂದೆ ಕಾಲ್ನಡಿಗೆಯಲ್ಲಿಯೇ ಸಾಗಬೇಕು. ಪ್ರವಾಸಿಗರಿಗೆ ಲಾಡ್ಜಿಂಗ್‌ ವ್ಯವಸ್ಥೆಯೂ ಕೂಡ ಇದೆ. ಸಮೀಪದಲ್ಲಿಯೇ ಸಾಕಷ್ಟು ಹೋಟೆಲ್‌ಗಳು, ಅರಣ್ಯ ಇಲಾಖೆ ಪ್ರವಾಸಿ ಮಂದಿಗಳಿವೆ.

Please Wait while comments are loading...