ಫೋಕರ್ ಇದಲ್ಲದೇ ಫೋಕಾರ್ ಅಂತಲೂ ಗುರುತಾಗಿದೆ. ಇದು ಗುಡ್ಡದ ತುದಿಯಲ್ಲಿದ್ದು, ಶರಂಗೊಲೆ ಆಶ್ರಮದ ಪಕ್ಕದಲ್ಲೇ ಇದೆ. ಈ ಪ್ರದೇಶವು ಪೋಂಕಾರ್ ರೈಜೋಂಗ್ ಹಾಗೂ ಅರ್ಗ್ಯಂಗ ಡೈಜೋಂಗ್ ಎಂದು ಗುರುತಾಗಿದೆ. ಪೋಂಕಾರ್ ರೈಜೋಂಗ್ ಒಂದು ಗೋಲವಾದ ಸಮತಟ್ಟಾದ ಭೂಮಿ ಹಾಗೂ ಧ್ಯಾನಕ್ಕೆ ಹೇಳಿಮಾಡಿಸಿದಂತಿರುವ ಸ್ಥಳವಾಗಿದೆ. ಇದು ಗುಹೆ ಹಾಗೂ ಬೆಟ್ಟದ ತಪ್ಪಲಿನಿಂದ ಕೂಡಿದ ಪ್ರದೇಶವಾಗಿದೆ.
ಇದಲ್ಲದೇ ಇನ್ನೂ ಸಾಕಷ್ಟು ಅನ್ಯ ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಇವನ್ನು ಈ ಭಾಗದ ಜನಪ್ರಿಯ ಬೌದ್ಧ ಗುರು ಪದ್ಮಸಂಭವ ಅವರೂ ಸೇರಿದಂತೆ ಹಲವು ಸಂತರು ಪತ್ತೆ ಹಚ್ಚಿದ್ದಾರೆ.
ಈ ಬೆಟ್ಟದ ತಪ್ಪಲು ತಲುಪಲು ಟ್ರೆಕ್ಕಿಂಗ್ ಒಂದೇ ಮಾರ್ಗ. ಪ್ರವಾಸಿಗರು ನಡೆದೇ ಇಲ್ಲಿಗೆ ತಲುಪಬೇಕು. ಈ ತಾಣ ತಲುಪಲು ಎರಡು ಮಾರ್ಗಗಳಿವೆ. ಗುಹೆಯ ಮಾರ್ಗದ ಮೂಲಕ ಒಂದು ಕಿ.ಮಿ ನಷ್ಟು ದೂರ ನಡೆದು ಬಂದು ತಲುಪಬಹುದು. ಇನ್ನೊಂದು ಪಕ್ಕದ ಬೆಟ್ಟದಿಂದ ಸುಮಾರು ನಾಲ್ಕು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ತಲುಪಬಹುದು. ಜೂನ್ ಹಾಗೂ ಜುಲೈ ತಿಂಗಳಲ್ಲಿ ಗುಹಾಂತರ ಮಾರ್ಗ ಮುಚ್ಚಲ್ಪಡುತ್ತದೆ.


Click it and Unblock the Notifications