ಮುಲಬೇಕ್ ಆಶ್ರಮವು ಕಾರ್ಗಿಲ್ ಕಣಿವೆಯ ಕೊನೆಯಲ್ಲಿರುವ ಮುಲಬೇಕ್ ಎಂಬ ಹಳ್ಳಿಯಲ್ಲಿ ಇದೆ. ಇದು ಕಾರ್ಗಿಲ್‌ನಿಂದ 45 ಕಿ.ಮೀ. ದೂರ. ಬೆಟ್ಟದ ಮೇಲಿರುವ ಈ ಆಶ್ರಮ ರಸ್ತೆಯಿಂದ 200 ಮೀಟರ್ ಎತ್ತರದಲ್ಲಿದೆ. ಈ ಆಶ್ರಮ ಅಥವಾ ಗೊಂಪಾವು ಮೈತ್ರೇಯ ಬುದ್ಧನ 9 ಮೀಟರ್ ಎತ್ತರವಾದ ವಿಗ್ರಹವನ್ನು ಹೊಂದಿದೆ. ಈ ಮೂರ್ತಿಯು ನಗುವ ಬುದ್ಧ ಅಂತಲೂ ಜನಪ್ರಿಯವಾಗಿದೆ. ಇದು ಎಂಟನೇ ಶತಮಾನದಲ್ಲಿ ಕೆತ್ತಿದ ವಿಗ್ರಹವಾಗಿದ್ದು, ಮಿಷನರಿಗಳು ಬೌದ್ಧ ಧರ್ಮ ಪ್ರಚಾರವನ್ನು ಲಡಾಖ್‌ನಲ್ಲಿ ಕೈಗೊಂಡ ಸಂದರ್ಭದಲ್ಲಿ ತಂದು ಸ್ಥಾಪಿಸಿದ್ದಾರೆ. ಇಲ್ಲಿಗೆ ಸಾಕಷ್ಟು ಬೌದ್ಧ ಗುರುಗಳು ಭೇಟಿ ನೀಡಿದ್ದರು. ಅವರ ನೆನಪುಗಳ ಇಲ್ಲಿವೆ. ಮೂರ್ತಿಯ ಕೆತ್ತನೆ, ಆಶ್ರಮದ ವಾಸ್ತುಶಿಲ್ಪ ಗಮನಿಸಿದಾಗ ಇದು ಟಿಬೇಟ್‌ಗೆ ಸಂಬಂಧಿಸಿದ್ದಲ್ಲ ಎನ್ನುವ ಅರಿವು ಮೂಡುತ್ತದೆ.


Click it and Unblock the Notifications