Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಜನೂರ್ » ಆಕರ್ಷಣೆಗಳು » ಅಗ್ನೀಶ್ವರರ್ ದೇವಸ್ಥಾನ

ಅಗ್ನೀಶ್ವರರ್ ದೇವಸ್ಥಾನ, ಕಂಜನೂರ್

1

ತಮಿಳುನಾಡಿನಲ್ಲಿರುವ 9 ನವಗ್ರಹ ದೇವಸ್ಥಾನಗಳಲ್ಲಿ ಅಗ್ನೀಶ್ವರರ್ ದೇವಸ್ಥಾನವು 6 ನೇ ನವಗ್ರಹ ಸ್ಥಳಂ. ಈ ದೇವಸ್ಥಾನದಲ್ಲಿರುವ ಶಿವನನ್ನು ಅಗ್ನೀಶ್ವರರ್ ಎಂದು ಕರೆದರೆ, ದೇವಿ ಪಾರ್ವತಿಯನ್ನು ಕರ್ಪಾಗಂಬಲ್ ಎನ್ನುತ್ತಾರೆ. ಜನ್ಮ ಕುಂಡಲಿಯಲ್ಲಿರುವ ದೋಷಗಳ ನಿವಾರಣೆಗಾಗಿ ಜನರು ಈ ದೇವಸ್ಥಾನದಲ್ಲಿ ಶಿವನ ರೂಪದಲ್ಲಿರುವ ಶುಕ್ರನ ಪೂಜೆ ಮಾಡುತ್ತಾರೆ.

ಈ ದೇವಸ್ಥಾನದ ಬಗ್ಗೆ ಪುರಾಣಗಳಲ್ಲಿರುವ ಕಥೆಯೆಂದರೆ, ಬ್ರಹ್ಮ ದೇವನು ಈ ಜಾಗದಲ್ಲಿ ಶಿವ ಮತ್ತು ಪಾರ್ವತಿಯ ಮದುವೆ ಮಾಡುವ ಕನಸು ಕಂಡಿದ್ದ. ಅಗ್ನಿಯ ರೂಪ ತಳೆದಿರುವ ಶಿವ ಇಲ್ಲಿರುವ ಕಾರಣ ಈ ದೇವಸ್ಥಾನಕ್ಕೆ ಅಗ್ನೀಶ್ವರರ್ ಎಂದೂ ಕರೆಯಲಾಗುತ್ತಿದೆ. ಬ್ರಹ್ಮ ದೇವ ಪೂಜಿಸಿದ್ದ ಬ್ರಹ್ಮ ಲಿಂಗವೂ ಈ ದೇವಸ್ಥಾನದ ಒಳಗಡೆಯಿದೆ. ಇದು ಶುಕ್ರನ ದೇವಸ್ಥಾನವಾದರೂ ಶುಕ್ರನಿಗೆಂದು ಪ್ರತ್ಯೇಕ ಗರ್ಭಗುಡಿಯಿಲ್ಲ. ಇಲ್ಲಿ ಶಿವನೇ ಶುಕ್ರನ ರೂಪದಲ್ಲಿದ್ದಾನೆನ್ನುವ ಪ್ರತೀತಿ.

ಅಗ್ನೀಶ್ವರರ್ ದೇವಸ್ಥಾನದಲ್ಲಿ ಎರಡು ಪ್ರಕಾರಗಳಿವೆ. ಕಾಲಿಕಂಬರ್ ಮತ್ತು ಮನಕಂಜರರ್ ಇತರ ಎರಡು ಪುಣ್ಯಕ್ಷೇತ್ರಗಳು. ಈ ದೇವಸ್ಥಾನದಲ್ಲಿ ಶಿವಕಾಮಿ ಮತ್ತು ನಟರಾಜನ ಕಲ್ಲಿನ ಮೂರ್ತಿಗಳಲ್ಲದೆ ವಿಜಯನಗರ ಹಾಗೂ ಚೋಳರ ಕಾಲದಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಇವೆ. ನಟರಾಜ ಸಭಾ ಮುಕ್ತಿ ಮಂಟಪಕ್ಕೆ ಮತ್ತು ಶಿವ ತಾಂಡವಂ ಮುಕ್ತಿ ತಾಂಡವಂಗೆ ಪ್ರಸಿದ್ದಿಯಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed