Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಕಟ್ರಮಲ್

ಕಟ್ರಮಲ್, ಕಂಧಮಲ್

1

ಕಟ್ರಮಲ್ ಫುಲ್ಬನಿಯಿಂದ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಕಟ್ರಮಲ್‍ನಲ್ಲಿ ಅಪರೂಪವಾದ, ಅನುಪಮ ಪ್ರಾಕೃತಿಕ ಸೌಂದರ್ಯವನ್ನು ನಾವು ಕಾನಬಹುದು. ದಟ್ಟವಾದ ಕಾಡಿನ ನಡುವೆ ಬೆಟ್ಟದ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು ಇಲ್ಲಿ ಹಲವಾರು ಇವೆ. ಕಟ್ರಮಲ್‍ಗೆ ಸಾಗುವ ಹಾದಿಯು ಜಲ್ಲಿ ಕಲ್ಲುಗಳಿಂದ ಕೂಡಿದ್ದು, ಹಳ್ಳ ದಿನ್ನೆಗಳಿಂದ ಕೂಡಿದೆ. ಇಲ್ಲಿನ ಪ್ರಯಾಣವು ಪ್ರಾಯಾಸಕರವಾಗಿರುತ್ತದೆ. ಆದರೆ ಒಮ್ಮೆ ಈ ಅದ್ಭುತವಾದ ಜಲಪಾತವನ್ನು ನೋಡಿದ ನಂತರ ಪ್ರಯಾಣದ ಆಯಾಸವೆಲ್ಲವು ಮರೆತು ಹೋಗುತ್ತದೆ. ಇದು ಪ್ರಾಕೃತಿಕ ಸೌಂದರ್ಯದ ಪರಾಕಾಷ್ಠೆಯ ಒಂದು ಉದಾಹರಣೆಯಾಗಿ ನಿಂತಿದೆ.

ಇಲ್ಲಿನ ಪ್ರಧಾನ ಆಕರ್ಷಣೆಯೆಂದರೆ ಜಲಪಾತದ ಬುಡದಲ್ಲಿನ ಕೊಳದಲ್ಲಿರುವ ಮೀನುಗಳು. ಅವುಗಳು ಅಕ್ಕ ಪಕ್ಕದಲ್ಲಿ ದೊರೆಯುವ ಆಹಾರಗಳನ್ನು ಕಬಳಿಸಲು ಹಾರಿ ಹಾರಿ ಬೀಳುವ ದೃಶ್ಯವು ಪ್ರವಾಸಿಗರಿಗೆ ಒಳ್ಳೆಯ ಮನೋರಂಜನೆಯನ್ನು ಒದಗಿಸುತ್ತದೆ. ಇಲ್ಲಿ ಪ್ರವಾಸಿಗರು ಮೀನುಗಳಿಗೆ ಬಿಸ್ಕೆಟ್ ಅಥವಾ ಕಳ್ಳೆಪುರಿಯನ್ನು ಎಸೆದು, ಅವು ಹಾರಿ ಬಂದು ತಿನ್ನುವುದನ್ನು ನೋಡಿ ಅಶ್ಚರ್ಯಪಡುತ್ತಾರೆ. ಕಟ್ರಮಲ್ ಸುತ್ತಲು ಇರುವ ಬಂಡೆಗಳಿಂದ ಕೂಡಿದ ಬೆಟ್ಟಗಳಲ್ಲಿ, ಎತ್ತರವಾಗಿ ಬೆಳೆದಿರುವ ಹಲವಾರು ಮರಗಳನ್ನು ನಾವು ಕಾಣಬಹುದು. ಅವಿಶ್ರಾಂತ ದುಡಿಮೆಯಿಂದ ಬೇಸತ್ತ ಜನರಿಗೆ ಇದು ಒಂದು ಅದ್ಭುತವಾದ ವಿಶ್ರಾಂತಿ ತಾಣವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat