Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಬೆಲ್‍ಗಡ್

ಬೆಲ್‍ಗಡ್, ಕಂಧಮಲ್

1

ಬೆಲ್‍ಗಡ್ ಪುಲ್ಬನಿಯಿಂದ 155 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸಮುದ್ರ ಮಟ್ಟದಿಂದ 2555 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಇದು ಮುಗಿಲೆತ್ತರಕ್ಕೆ ನಿಂತ ಬೆಟ್ಟ-ಗುಡ್ಡಗಳಿಂದ, ದಟ್ಟವಾದ ಕಾಡುಗಳಿಂದ ಮತ್ತು ಅನುಪಮವಾದ ವನ್ಯಜೀವಿಗಳಿಂದ ಕೂಡಿದೆ. ಬೆಲ್‍ಗಡ್ ಇಲ್ಲಿನ ಮೂಲನಿವಾಸಿಗಳಾದ " ಕುಟಿಯ ಖಂದಾಸ್‍"ರವರ ಆವಾಸ ಸ್ಥಾನವಾಗಿದೆ. ಬೆಲ್‍ಗಡ್ ವನ್ಯಧಾಮವು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ಆವಾಸ ಸ್ಥಾನವಾಗಿದೆ. ಬಿಳಿ ಸೊಂಡಿಲಿನ ಆನೆಗಳು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ. ಮರದಲ್ಲಿ ನಿರ್ಮಿಸಲಾಗಿರುವ ಅರಣ್ಯ ಇಲಾಖೆಯ ಪ್ರವಾಸಿ ಬಂಗಲೆಯು ಇಲ್ಲಿನ ಆಕರ್ಷಣೆಯಾಗಿದೆ. ಇದಕ್ಕೆ ವಿದ್ಯುಚ್ಛಕ್ತಿಯನ್ನು ಸೌರ ಶಕ್ತಿಯಿಂದ ಒದಗಿಸಲಾಗುತ್ತದೆ.

ಉಷಾಬಲಿ ಕಣಿವೆಯಲ್ಲಿ ನವಿಲುಗಳ ಬೃಹತ್ ಸಮೂಹವನ್ನು ನಾವು ಕಾಣಬಹುದು. ಈ ಕಣಿವೆಯು ಇಲ್ಲಿನ ಸೊಬಗಿಗೆ ತನ್ನದೇ ಆದ ಮೆರಗನ್ನು ನೀಡಿದೆ. ಬೆಲ್‍ಗಡ್‍ನ ಬುಡಕಟ್ಟು ಸಮುದಾಯದವರು ಮಾಡುವ ಬಿದಿರಿನ ಕಲಾವಸ್ತುಗಳು ತಮ್ಮದೇ ಆದ ಪ್ರತ್ಯೇಕತೆಯನ್ನು ಹೊಂದಿವೆ. ಕೊಟಗಡ್ ವನ್ಯಧಾಮವು ಬೆಲ್‍ಗಡ್‍ಗೆ ಸಮೀಪದಲ್ಲಿ ನೆಲೆಗೊಂಡಿದೆ. ಇಲ್ಲಿ ಹುಲಿ, ಗೌರ್, ಸಾಂಬರ್, ಚುಕ್ಕೆ ಜಿಂಕೆ, ಆನೆ, ನವಿಲು, ಕಾಡು ಕೋಳಿ ಹಾಗು ಸರಿಸೃಪಗಳು ಮತ್ತು ಇತರ ಪ್ರಾಣಿಗಳು ನೆಲೆಗೊಂಡಿವೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat