ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನವನ್ನು 1977ರಲ್ಲಿ ಸ್ಥಾಪನೆ ಮಾಡಲಾಯಿತು. ಇದು ಸಿಕ್ಕಿಂ ರಾಜ್ಯದಲ್ಲಿರುವ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. 850 ಚ.ಕಿ.ಮೀ ನಷ್ಟು ವಿಸ್ತಾರವನ್ನು ಹೊಂದಿರುವ ಈ ಉದ್ಯಾನವನವು ಸಿಕ್ಕಿಂನ ಉತ್ತರ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಉತ್ತರಕ್ಕೆ ಟೆಂಟ್ ಶಿಖರವಿದ್ದರೆ,...
ಕಂಚನ್ ಜುಂಗಾ ಜಲಪಾತಕ್ಕೆ ತಲುಪಲು ಪೆಲ್ಲಿಂಗ್‍ನಿಂದ ಒಂದೂವರೆ ಗಂಟೆಗಳ ಕಾಲ ಪ್ರಯಾಣ ತಗುಲುತ್ತದೆ. ಇಲ್ಲಿ ಗ್ರಾನೈಟ್ ಬಂಡೆಗಳ ಮೇಲಿನಿಂದ ಧುಮ್ಮಿಕ್ಕುವ ಜಲ ಧಾರೆಯನ್ನು ನೋಡುವುದೇ ಒಂದು ಭಾಗ್ಯ. ಯುಕ್ಸೊಂ ಕಡೆಗೆ ಸಾಗುವ ಪ್ರವಾಸಿಗರು ಈ ಪ್ರಕೃತಿಯ ವೈಭವವನ್ನು ನೋಡಲು ಇಲ್ಲಿ ನಿಂತು ನಂತರ ಮುಂದೆ ಸಾಗುತ್ತಾರೆ.
ಸಿಕ್ಕಿಂನಲ್ಲಿರುವ ಅತಿ ಎತ್ತರವಾದ ಶಿಖರಗಳಲ್ಲಿ ಸಿನಿಯೊಲ್ಚು ಶಿಖರವೂ ಒಂದು. ಇದು ಸುಮಾರು 6888 ಮೀ. ಎತ್ತರವಾಗಿದೆ. ಈ ಶಿಖರ ಪರ್ವತವು ಕಂಚನ್ ಜುಂಗಾದ ಹತ್ತಿರದಲ್ಲಿರುವ ಗ್ರೀನ್ ಲೇಕ್ ಎರಿಯಾ ಎಂಬ ಪ್ರದೇಶದ ಬಳಿಯಲ್ಲಿದೆ.
ಈ ಸುಂದರ ಹಿಮಚ್ಛಾದಿತ ಪರ್ವತವು ಅಸಂಖ್ಯಾತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು...
ಸಿಕ್ಕಿಂ ನಲ್ಲಿ ಕಾಣಬಹುದಾದ ಅತಿ ಎತ್ತರದ ಶಿಖರಗಳಲ್ಲಿ ಪಂಡಿಂ ಶಿಖರವೂ ಒಂದು. ಸುಮಾರು 22010 ಅಡಿಗಳಷ್ಟು ಎತ್ತರವಿರುವ ಈ ಶಿಖರವು ಹಿಮಚ್ಛಾದಿತ ಪರ್ವತಗಳ ನಡುವೆ ನೆಲೆಸಿದ್ದು ಸುಂದರವಾಗಿ ಗೋಚರಿಸುತ್ತದೆ. ಈ ಪರ್ವತ ಶ್ರೇಣಿಯ ಹತ್ತಿರದಲ್ಲೆ ಇರುವ 'ಝೊಂಗ್ರಿ ಟಾಪ್' ನಿಂದ ಇದರ ವಿಹಂಗಮ ನೋಟವನ್ನು...
ಪೂರ್ವ ಹಿಮಾಲಯದ ಟಿಬೇಟ್ ಮತ್ತು ಸಿಕ್ಕಿಂ ಗಡಿಗಳಲ್ಲಿ ಪೌಹುನ್ರಿ ಶಿಖರವು ನೆಲೆಗೊಂಡಿದೆ. ಕಂಚನ್ ಜುಂಗಾದಿಂದ ಈ ಶಿಖರವು 75 ಕಿ.ಮೀ ದೂರದಲ್ಲಿದೆ ಹಾಗು ಸಮುದ್ರ ಮಟ್ಟದಿಂದ 7128 ಮೀಟರ್ಸ್ ಎತ್ತರದಲ್ಲಿ ಸ್ಥಿತಗೊಂಡಿದೆ.
ಈ ಶಿಖರದ ಕುರಿತು ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಸ್ಕಾಟೀಷ್ ಪರ್ವತಾರೋಹಿ ಅಲೇಕ್ಸಾಂಡರ್...