ಕಬಿನಿ ಬಳಿ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ವಾಹನಗಳು ಹೋಗಲು ಯಾವುದೇ ಸಮಪರ್ಕ ರಸ್ತೆ ಇಲ್ಲವಾದ್ದರಿಂದ ಪ್ರವಾಸಿಗರು ಇಲ್ಲಿ ಆನೆ ಸವಾರಿ ಮಾಡುತ್ತ ಅರಣ್ಯದಲ್ಲಿ ಸಫಾರಿ ಮಾಡಬಹುದು. ಆನೆ ಸವಾರಿ ಖುಷಿಯೊಂದಿಗೆ ಅರಣ್ಯದಲ್ಲಿನ ಪ್ರಾಣಿ ಸಂಕುಲ, ವಿವಿಧ ಗಿಡಮರಗಳ ಪ್ರಕೃತಿಯ ಸೌಂದರ್ಯ ನೋಡುತ್ತ ಸಫಾರಿ ಮಾಡುವುದು ಪ್ರವಾಸಿಗರಿಗೆ ಅತಿ ಹೆಚ್ಚಿನ ಸಂತೋಷವೆನಿಸುವುದರಲ್ಲಿ ಸಂಶಯವೇ ಇಲ್ಲ. ಆನೆ ಸವಾರಿಯನ್ನು ಇಡೀ ಕುಟುಂಬ ಸಮೇತ ಮಾಡಬಹುದಾದಂತ ಸೌಲಭ್ಯ ಇಲ್ಲಿದೆ. ಅಲ್ಲದೇ ಇಲ್ಲಿನ ಆನೆಗಳನ್ನು ಸವಾರಿ ಮಾಡುವಾಗ ಹಿಂದೆ ಬರೀ ರಾಜ- ಮಹಾರಾಜರಷ್ಟೇ ಆನೆ ಸವಾರಿ ಮಾಡುತ್ತಿದ್ದ ನೆನಪು ಮನಸಿಗೆ ಮುದ ನೀಡುತ್ತದೆ. ಸಫಾರಿಗೆ ಕರೆದೊಯ್ಯುವ ಆನೆಯ ಬೆನ್ನ ಮೇಲೆ ಮೆತ್ತನೆ ಹಾಸಿಗೆ ಹಾಸಲಾಗಿರುತ್ತದೆ. ಅಲ್ಲದೇ ಪ್ರವಾಸಿಗರು ಗಟ್ಟಿಯಾಗಿ ಹಿಡಿದುಕೊಳ್ಳು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇದರಿಂದ ಪ್ರವಾಸಿಗರು ಧೈರ್ಯದಿಂದ ಮೆಲ್ಲನೆಯ ನಡೆಯುವ ಆನೆ ಸವಾರಿ ಮಾಡುತ್ತ ಸಫಾರಿ ಆನಂದಿಸಬಹುದು. ಪ್ರವಾಸಿಗರು ಆನೆ ಸವಾರಿ ಮಾಡಲು ಹತ್ತುವ ಆನೆಗೆ ಮೆತ್ತನೆಯ ವಿಶಿಷ್ಟವಾದ ಹಾಸಿಗೆಯನ್ನು ಆನೆಯ ಬೆನ್ನ ಮೇಲೆ ಹಾಸಲಾಗಿರುತ್ತದೆ. ಅದರೊಂದಿಗೆ ರಕ್ಷಣೆಗೆಂದು ವಿಶಿಷ್ಟ ಹಗ್ಗವನ್ನು ನೀಡಲಾಗಿರುತ್ತದೆ. ಕಬಿನಿ ಅರಣ್ಯ ಪ್ರದೇಶಕ್ಕೆ ಬರುವ ಪ್ರವಾಸಿಗರು ಆನೆ ಸಫಾರಿ ಮಾಡಿ ಇಲ್ಲಿ ಅನೇಕ ಹೆಚ್ಚಿನ ವಿಶೇಷತೆಗಳನ್ನು ಕಂಡುಕೊಳ್ಳಬಹುದು.