ಯಂತ್ರೋದ್ಧಾರಕ ಆಂಜನೇಯನೆಂದೂ ಕರೆಯಲ್ಪಡುವ, ಈ ದೇವಾಲಯವು ಹಂಪಿಯ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಹಣುಮಂತ ಅಥವಾ ಆಂಜನೇಯನಿಗೆ ಅರ್ಪಿತವಾಗಿದ್ದು, ಕೊದಂಡ ರಾಮ ಮಂದಿರದ ಹಿಂಬದಿಯಲ್ಲಿದೆ. ಇಲ್ಲಿ ಹಣುಮಂತನ ವಿಗ್ರಹವು ತಾಯತ ಅಥವಾ ಯಂತ್ರದಲ್ಲಿದ್ದು ಸುತ್ತಲೂ ಕೋತಿಯ ರೂಪಗಳನ್ನು ಕೆತ್ತಲಾಗಿದೆ.
ಇಲ್ಲಿ ಹಣುಮಂತನು ಕುಳಿತು ಪ್ರಾರ್ಥಿಸುತ್ತಿರುವ ಅಥವಾ ಧ್ಯಾನಿಸುತ್ತಿರುವ ಭಂಗಿಯಲ್ಲಿದ್ದು ಅತ್ಯಂತ ವಿಶಿಷ್ಟವಾಗಿದೆ. ಇದೊಂದು ಹಿಂದು ಸಂಸ್ಕೄತಿಯ ದೇವಾಲಯವಾಗಿದ್ದು, ಗೋಡೆಗಳ ಹೊರಭಾಗವು ಕೇಸರಿ ಬಣ್ಣದ್ದಾಗಿದ್ದು ಬಿಳಿ ಪಟ್ಟಿಗಳನ್ನು ಹೊಂದಿದೆ. ಹೊರ ಆವರಣದಲ್ಲಿ ಪವೀತ್ರವಾದ ಅತ್ತಿ ಗಿಡವಿದ್ದು ಅದರ ಕೆಳಗಡೆ ಅನೇಕ ಬಗೆಯ ಸರ್ಪದ ಕಲ್ಲುಗಳನ್ನು ಕಾಣಬಹುದು. ಈ ದೇವಾಲಯವು ಭಕ್ತರಿಗಾಗಿ ಬೆಳಿಗ್ಗೆ ಮತ್ತು ಸಾಯಂಕಾಲದಂದು ತೆರೆದಿರುತ್ತದೆ.


Click it and Unblock the Notifications