Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಉದ್ದನ ವೀರಭದ್ರ ದೇವಾಲಯ

ಉದ್ದನ ವೀರಭದ್ರ ದೇವಾಲಯ, ಹಂಪಿ

1

ಉದ್ದನ ವೀರಭದ್ರ ದೇವಾಲಯವು 3.6ಮೀ ಎತ್ತರದ, ಒಂದೆ ಕಲ್ಲಿನಲ್ಲಿ ಕೆತ್ತಲಾದ, ಶಿವನ ಮತ್ತೊಂದು ರೂಪವೆಂದೇ  ನಂಬಲಾದ ಉದ್ದನ ವೀರಭದ್ರನ ವಿಗ್ರಹವನ್ನು ಹೊಂದಿದೆ. ವಿಗ್ರಹವು ನಾಲ್ಕು ಭುಜಗಳನ್ನು ಹೊಂದಿದ್ದು, ಕತ್ತಿ, ಬಿಲ್ಲು,ಬಾಣ ಹಾಗು ಢಾಲುಗಳನ್ನು ಹೊಂದಿದೆ. ಚಿಕ್ಕದಾಗಿರುವ ದಕ್ಷ ಹಾಗು ಸರ್ವಾಂಗ ಲಿಂಗ(ಶಿವ ಲಿಂಗ) ಗಳನ್ನು ಭಕ್ತರು ಇಲ್ಲಿ ಕಾಣಬಹುದು. ಈ ಗುಡಿಯಲ್ಲಿ ಚಿತ್ರಗಳನ್ನು ತೆಗೆಯುವುದನ್ನು ನಿಶೇಧಿಸಲಾಗಿದೆ.ವೀರಭದ್ರನ ಮೂಲದ ಕುರಿತು ಅನೇಕ ಪೌರಾಣಿಕ ಕಥೆಗಳಿವೆ. ಅವುಗಳಲ್ಲಿ ಜನಪ್ರೀಯವಾದ ಕಥೆಯೊಂದರ ಪ್ರಕಾರ, ಶಿವನ ಹೆಂಡತಿಯಾದ ಸತಿಯು ತನ್ನ ತಂದೆಯಾದ ದಕ್ಷನಿಂದ ಅವಮಾನಿತಗೊಂಡು ಪ್ರಾಣ ತ್ಯಾಗಮಾಡುತ್ತಾಳೆ. ಇದರಿಂದ ಕುಪಿತನಾದ ಶಿವನ ಒಂದು ಅಂಶವು ವೀರಭದ್ರನಾಗಿ ಜನ್ಮ ತಳೆದು, ದಕ್ಷನನ್ನು ಸಂಹರಿಸುತ್ತಾನೆ. ಈ ದೇವಾಲಯವು ಹಿಂದು ಸಂಸ್ಕೄತಿಯ ಮುರು ಪ್ರಮುಖ ದೇವರಲ್ಲಿ ಒಬ್ಬನಾದ ಶಿವನ ಪ್ರಚಂಡ ರೂಪಕ್ಕೆ ಸಮರ್ಪಿತವಾಗಿದೆ.ಈ ತಾಣವು, ರಾಯಲ್ ಎನ್ಕ್ಲೊಸರ್ ಮತ್ತು ಪವಿತ್ರ ಸ್ಥಳದ ಮಧ್ಯದಲ್ಲಿದ್ದು ಮುಖ್ಯ ರಸ್ತೆಗೆ ಹತ್ತಿರವಾಗಿದೆ.ಇಲ್ಲಿ ದೀವಿಗೆ ಹಾಗು ಸತಿ ಕಲ್ಲನ್ನು ಕಾಣಬಹುದು. ಯುದ್ಧಗಳಲ್ಲಿ ಹತರಾದ ಸೈನಿಕರ ಹೆಂಡತಿಯರಿಗೆ ಇವು ಸಮರ್ಪಿತವಾಗಿವೆ. ಈ ತಾಣವು ಚಂಡಿಕೇಶ್ವರ ದೇವಾಲಯದ ಎದುರು ಬದಿಯಲ್ಲಿದ್ದು, ಹಂಪಿಯ ಮುಖ್ಯ ದ್ವಾರವು ಇದರ ಸುತ್ತಲಿರುವ ಗೊಡೆಯ ಮುಲಕ ಹಾದುಹೋಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed