ಸೂರಜ್ ಕುಂಡ ಇದೊಂದು ಪ್ರಸಿದ್ಧ ಸುಂದರ ಕೊಳವಾಗಿದ್ದು, ಗ್ವಾಲಿಯರ್ ಕೋಟೆ ಸ್ಮಾರಕದ ಸನಿಹದಲ್ಲಿದೆ. ಇದು ರಾಜ ಸೂರಜ್ ಕುಂಡನ ಕುರಿತು ಪ್ರಚಲಿತದಲ್ಲಿರುವ ಪೌರಾಣಿಕ ಅಥವಾ ಜಾನಪದ ಕಥನದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ಆ ಕಥನವು ಈ ರೀತಿಯಾಗಿದೆ. ರಾಜ ಸೂರಜ ಸೇನನು ಗುಣ ಪಡಿಸಲಾಗದ ಕುಷ್ಟ ರೋಗದಿಂದ ನರಳುತ್ತಿದ್ದನು. ಅದೃಷ್ಟವಶಾತ ಅವನು ಒಂದು ದಿನ ಗ್ವಾಲಿಯರ್ ಕೋಟೆಯ ಬಳಿ ಗ್ವಾಲಿಪ ಎಂಬ ಒಬ್ಬ ಸಂತನನ್ನು ಭೇಟಿಯಾಗಿ ತನ್ನ ಈ ರೋಗದ ಕುರಿತು ಹೇಳಿ ಕೊಂಡನು. ಆಗ ಸಂತನು ರಾಜನಿಗೆ ಈ ಕೊಳದಿಂದ ಸ್ವಲ್ಪ ನೀರನ್ನು ಕುಡಿಯುವಂತೆ ಹೇಳಿದನು.
ಅದರಂತೆ ರಾಜನು ಸ್ವಲ್ಪ ನೀರನ್ನು ಕುಡಿದಾಗ ಅವನ ಕುಷ್ಟ ರೋಗವೆಲ್ಲ ಗುಣವಾಯಿತು. ಈ ಕಾರಣಕ್ಕಾಗಿ ರಾಜನು ಈ ನಗರಕ್ಕೆ ಗ್ವಾಲಿಯರ್ ಎಂದು ನಾಮಕರಣ ಮಾಡಿದನು. ನಂತರದ ದಿನಗಳಲ್ಲಿ ಇದು ಗ್ವಾಲಿಯರ್ ನಗರ ಎಂದೇ ಪ್ರಸಿದ್ಧಿಯನ್ನು ಪಡೆಯಿತು. ಕೊಳವು ಕೂಡ ರಾಜ ಸೂರಜ ಸೇನನ ಹೆಸರನ್ನು ಪಡೆದುಕೊಂಡು ಸೂರಜ ಕುಂಡ ಎಂದು ಪ್ರಸಿದ್ಧಿಯನ್ನು ಪಡೆಯಿತು. ಇದು ಪೌರಾಣಿಕ ಕಥೆಯನ್ನು ನೆನೆಪಿಸುತ್ತದೆ. ಪುರಾಣದೊಂದಿಗೆ ತಳುಕು ಹಾಕಿಕೊಂಡಿರುವ ಈ ಕೊಳವು ಸುಂದರ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ.


Click it and Unblock the Notifications