ಬಿಶ್ಬುಜಿ ದೇವಸ್ಥಾನ ಗುನಾದ ಅತ್ಯಂತ ಜನಪ್ರಿಯ ಆಕರ್ಷಣೆಯಾಗಿದೆ. ಈ ದೇವಸ್ಥಾನದಲ್ಲಿ 20 ಕೈಗಳಿರುವ ದುರ್ಗಾ ಮಾತೆಯ ಮೂರ್ತಿಯಿದೆ. ದೇವಾಲಯವು ಒಂದು ಪುಟ್ಟ ಬೆಟ್ಟದ ಮೇಲ್ಭಾಗದಲ್ಲಿದೆ ಮತ್ತು ದೊಡ್ಡದಾದ ದೀಪದ ಕಂಬವಿದ್ದು, ಇದನ್ನು ದೀಪಸ್ತಂಭವೆನ್ನುತ್ತಾರೆ. ಈ ದೀಪಸ್ತಂಭ ತುಂಬಾ ದೂರದ ಪ್ರದೇಶಗಳಿಗೆ ಕಾಣಿಸುವುದರಿಂದ ದೇವಸ್ಥಾನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ವಾರ್ಷಿಕ ಜಾತ್ರೆ ನಡೆಯುತ್ತದೆ.
ಮಾರ್ಚ್ ಅಥವಾ ಎಪ್ರಿಲ್ ಮತ್ತು ಸಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಬರುವ ದುರ್ಗಾ ಅಷ್ಟಮಿ ವೇಳೆ ಇಲ್ಲಿ ವಾರ್ಷಿಕ ಮಹೋತ್ಸವ ನಡೆಯುತ್ತದೆ. ವಾರ್ಷಿಕ ಜಾತ್ರಾ ಮಹೋತ್ಸವ ಸುಮಾರು 9 ದಿನಗಳ ಕಾಲ ನಡೆಯುತ್ತದೆ. ಈ ವೇಳೆ ವಿಶೇಷ ಪೂಜೆ ಮತ್ತು ಅಭಿಷೇಕ ಮಾಡಲಾಗುತ್ತದೆ. ದುರ್ಗಾ ಅಷ್ಟಮಿ ವೇಳೆ ನಡೆಯುವ ವಾರ್ಷಿಕ ಮಹೋತ್ಸವ ಗುನಾದಲ್ಲಿ ಪ್ರವಾಸೋದ್ಯಮಕ್ಕೆ ಬಲ ನೀಡುತ್ತದೆ.


Click it and Unblock the Notifications