ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಸಂತ ರೋಶನ್ ಅಲಿ ಶಾ ರವರ ಸ್ಮರಣಾರ್ಥ ಈ ದರ್ಗಾವನ್ನು ನಿರ್ಮಿಸಲಾಗಿದೆ. ’ಧುನಿ’ ಎಂಬ ಅಗ್ಗಷ್ಟಿಕೆ ಅಂದಿನಿಂದಲೂ ಸತತವಾಗಿ ಉರಿಯುತ್ತಿದ್ದು ಅಲ್ಲಿಂದ ಏಳುವ ಹೊಗೆ ಪವಿತ್ರ ಎಂದು ಜನರು ನಂಬುತ್ತಾರೆ. ದರ್ಗಾದ ’ತಾಜಿಯಾ’ (ಪ್ರವಾದಿ ಹುಸೇನ್ ರ ಸಮಾಧಿಯ ಪ್ರತಿಕೃತಿ) ವನ್ನು ಚಿನ್ನ ಮತ್ತು ಬೆಳ್ಳಿ ಯನ್ನು ಬಳಸಿ ನಿರ್ಮಿಸಲಾಗಿದೆ. ನಗರ ಕೇಂದ್ರದಿಂದ ಸುಮಾರು ಎರಡು ಕಿ.ಮೀ. ದೂರವಿರುವ ಇಮಾಂಬಾರಾ ಪೀಠಕ್ಕೆ ಜನಾಬ್ ಅನಾನ್ ಫಾರೂಖ್ ಅಲಿ ಶಾ ರವರು ಇಂದಿನ ಧರ್ಮದರ್ಶಿಗಳಾಗಿದ್ದಾರೆ.


Click it and Unblock the Notifications