ಗಿರ್ನಾರ್ ಬೆಟ್ಟಗಳಲ್ಲಿರುವ ದೇವಾಲಯಗಳ ಪೈಕಿ ಅಂಬಾ ಮಾತಾ ದೇವಾಲಯ ಕೂಡಾ ಪ್ರಮುಖವಾದುದು. ಸುಮಾರು ೧೨ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯವು ಬಹಳ ಪುರಾತನವಾದುದು. ಅಂಬಾ ಮಾತೆಯು ಇಲ್ಲಿನ ಅಧಿದೇವತೆಯಾಗಿದ್ದು, ದೇವಾಲಯದ ನಿರ್ಮಾಣ ವೇಳೆಯಲ್ಲಿ ದೇವತೆಯ ಪಾದದ ಅಚ್ಚಿನೊಂದಿಗೆ ರಥದ ಗುರುತುಗಳು ಕಾಣಸಿಕ್ಕಿದ್ದವಂತೆ. ಹಿಂದೂ ಪುರಾಣಗಳ ಪ್ರಕಾರ ಇಂದೊಂದು ಪ್ರಮುಖ ದೇವಾಲಯವಾಗಿದ್ದು, ಭಗವಾನ್ ಶ್ರೀ ಕೃಷ್ಣನ ಕೇಶಮುಂಡನವನ್ನು ಇಲ್ಲಿ ಮಾಡಲಾಗಿತ್ತು ಎನ್ನುವ ನಂಬಿಕೆಯಿದೆ.


Click it and Unblock the Notifications