ದುರ್ಶೆಟ್ ವಿವಿಧ ಬಗೆಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯವನ್ನೊದಗಿಸಿದೆ. ಈ ಪ್ರಾಂತ್ಯವು ಸಹ್ಯಾದ್ರಿ ಶ್ರೇಣಿಯ ಅತ್ಯಂತ ಸುರಕ್ಷಿತವಾದ ಸ್ಥಳದಲ್ಲಿ ನೆಲೆಗೊಂಡಿದೆ. ಪರಿಸರ ಮತ್ತು ವನ್ಯಜೀವಿ ಪ್ರಿಯರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.
ದುರ್ಶೆಟ್‍ನಲ್ಲಿ ಜಂಗಲ್ ಸಫಾರಿಯು ಇಲ್ಲಿನ ಅಮೋಘವಾದ ಹಚ್ಚ ಹಸಿರಿನಿಂದ ಕಾಡುಗಳನ್ನು ಸುತ್ತಿ ನೋಡುವ ಅವಕಾಶವನ್ನೊದಗಿಸುತ್ತದೆ. ಇಲ್ಲಿನ ಪ್ರಾಕೃತಿಕ ಸಿರಿ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಪರಿಶುದ್ಧವಾದ ಗಾಳಿಯನ್ನು ಆಸ್ವಾದಿಸುತ್ತ, ಪ್ರಾಣಿಗಳನ್ನು ಅವುಗಳ ನೈಜ ಪರಿಸರದಲ್ಲಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶವನ್ನು ನೀವು ಇಲ್ಲಿ ಪಡೆಯಬಹುದು. ಪರಿಸರದ ವಿಶ್ವರೂಪವನ್ನು ಸವಿಯಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.


Click it and Unblock the Notifications