ಸಾವಿರಾರು ಚಾರಣಿಗರು ಮೊಟ್ಟಮೊದಲು ಬಿಡಾರ ಹೂಡುವುದು ನಲ್ಥಿ ಬಸ್ತಿಯಲ್ಲಿ. ಇದು ಭದೇರ್ವಾದಿಂದ 10 ಕಿ.ಮೀ. ದೂರದಲ್ಲಿದೆ. ಪ್ರಾಕೃತಿಕ ಸೌಂದರ್ಯದಿಂದ ಕಣ್ಮನ ಸೆಳೆಯುವ ಈ ತಾಣವನ್ನು ಪ್ರವಾಸಿಗರು ಚಾರಣ ಆರಂಭಿಸುವುದಕ್ಕೂ ಮುನ್ನ ಅಥವಾ ಭದೇರ್ವಾಕ್ಕೆ ತೆರಳುವ ಮಾರ್ಗಮಧ್ಯೆ ಇಲ್ಲಿ ತಂಗುವುದು ವಾಡಿಕೆ. ಹಿಮಪರ್ವತದ ನೆರಳಲ್ಲಿರುವ ಸುಗಂಧಭರಿತ ದಟ್ಟಕಾಡಿನ ನಡುವೆ ಇದ್ದು, ಹುಲ್ಲುಗಾವಲು, ಕಾಡು ಹೂಗಳಿಂದ ತುಂಬಿದೆ ಈ ತಾಣ.