ಮಧ್ಯ ಪ್ರದೇಶದಲ್ಲೇ ಪ್ರಮುಖ ಗಮ್ಯ ತಾಣವಾದ ಪಿಥಂಪುರ, ಇಡೀ ಏಷ್ಯಾದಲ್ಲೇ ಪ್ರಪ್ರಥಮ ಬೃಹತ್ ಔದ್ಯಮಿಕ ಕ್ಷೇತ್ರ. ಇಂದೋರ್ ನಿಂದ 22 ಕಿ.ಮೀ ದೂರದಲ್ಲಿರುವ ಪಿಥಂಪುರ ದೇಶ-ವಿದೇಶಗಳ ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳಿಗೆ ನೆಲೆಯಾಗಿದೆ. ಈ ಔದ್ಯಮಿಕ ನಗರಿಯು ನಾಲ್ಕು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು, ಸ್ಪೆಶಲ್ ಎಕನಾಮಿಕ್ ಜೋನನ್ನು ಹೊಂದಿದೆ. ಇಲ್ಲಿ ಕೆಲವು ಉತ್ತಮ ವಾಹನ ತಯಾರಿಕಾ ಸಂಸ್ಥೆಗಳಿವೆ. ಅಲ್ಲದೇ ಇದನ್ನು ದೇಶದ ವಾಹನ ಕೈಗಾರಿಕೆಯ ಕೇಂದ್ರ ಎಂತಲೂ ಕರೆಯುತ್ತಾರೆ. ಅಭಿವೃದ್ಧಿಶೀಲ ಭಾರತದ ಹೊಸಮುಖವನ್ನು ಧಾರ್ ಪ್ರವಾಸದ ವೇಳೆ ಕಾಣಬಹುದಾಗಿದೆ.


Click it and Unblock the Notifications