ರವಿಶಂಕರ್ ಆಣೆಕಟ್ಟು ಎಂದು ಕರೆಯಲ್ಪಡುವ ಗ್ಯಾಂಗ್ರೆಲ್ ಆಣೆಕಟ್ಟು ಧಮತರಿ ಜಿಲ್ಲೆಯ ಒಂದು ಖ್ಯಾತ ಪ್ರವಾಸಿ ತಾಣವಾಗಿದೆ. ಮಹಾನದಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ 15 ಕಿ. ಮೀ ದೂರದಲ್ಲಿದೆ. ಈ ಜಲಾಶಯದಲ್ಲಿರುವ ಗ್ಯಾಂಗ್ರೆಲ್ ಹೈಡ್ರೋ ಪವರ್ ಪ್ರಾಜೆಕ್ಟ್ ಮೂಲಕ ಸಮೀಪದ ಹಳ್ಳಿಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. ಇದು ಛತ್ತೀಸಗಡ್ ಸಂಸ್ಥಾನದ ದೊಡ್ಡ ಹಾಗೂ ಉದ್ದದ ಅಣೆಕಟ್ಟಾಗಿದೆ.