Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಹಯಾತ್‌ ಬಕ್ಷ್‌ ಬಾಗ್‌

ಹಯಾತ್‌ ಬಕ್ಷ್‌ ಬಾಗ್‌, ದೆಹಲಿ

1

ಹಯಾತ್‌ ಬಕ್ಷ್‌ ಬಾಗ್ ಅಥವಾ ಲೈಫ್‌ ಬೆಸ್ಟೋವಿಂಗ್‌ ಗಾರ್ಡನ್‌, ಕೆಂಪುಕೋಟೆಯ ಆವರಣದಲ್ಲಿ ಇದೆ. ಮೊಘಲರ ವಿನ್ಯಾಸ ಪ್ರಭಾವದಿಂದ ಈ ಉದ್ಯಾನವನ್ನು ನಿರ್ಮಿಸಲಾಗಿದೆ. ಈ ಸುಂದರ ಉದ್ಯಾನದಲ್ಲಿ ಟ್ಯಾಂಕ್‌ಗಳು, ಪೆವಿಲಿಯನ್‌ಗಳು, ನೀರಿನ ಚಾನೆಲ್‌ಗಳು ಕಾರಂಜಿಗಳಿವೆ. ಈ ಉದ್ಯಾನದ ಇತಿಹಾಸವನ್ನು ತಿರುವಿ ಹಾಕಿದರೆ ಇಲ್ಲಿ ನೀಲಿ, ಬಿಳಿ ಮತ್ತು ನೇರಳೆ ಬಣ್ಣದ ಹೂವುಗಳನ್ನು ಬೆಳೆಯಲಾಗುತ್ತಿತ್ತು.

ಶಾಹ್‌-ಬುರ್ಜ್‌ ಇರುವುದು ಉದ್ಯಾನದ ಈಶಾನ್ಯ ಭಾಗದಲ್ಲಿ. 1857 ರಲ್ಲಿ ನಡೆದ ಸಿಪಾಯಿ ದಂಗೆ ಸಂದರ್ಭದಲ್ಲಿ ಈ ಗೋಪುರದ ಮೇಲಿದ್ದ ಗುಮ್ಮಟವನ್ನು ತೆರವುಗೊಳಿಸಲಾಯಿತು. ತೆಂಕಣ ದಿಕ್ಕಿನ ಕೊನೆಯಲ್ಲಿರುವ ಇನ್ನೊಂದು ಗೋಪುರವನ್ನು ಉಳಿಸಿಕೊಳ್ಳಲಾಗಿದ್ದು ಇದನ್ನು ಅಸದ್‌-ಬುರ್ಜ್ ಎಂದು ಕರೆಯಲಾಗುತ್ತದೆ.

ಇದರ ಇನ್ನೊಂದು ಕೊನೆಯಲ್ಲಿ ಹಯಾತ್‌ ಭಕ್ಷ ಬಾಗ್‌ ಇದೆ. ಇಲ್ಲಿ ಎರಡು ಪೆವಿಲಿಯನ್‌ಗಳನ್ನು ಬಿಳಿ ಮಾರ್ಬಲ್‌ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇದನ್ನು ಸಾವನ್‌ ಹಾಗೂ ಭಾದೋನ್‌ ಪೆವಿಲಿಯನ್‌ ಎಂದು ಹೆಸರಿಸಲಾಗಿದೆ. ಇವೆರಡೂ ಹೆಸರುಗಳು ಮಳೆಗಾಲದ ಮಾಸದ ಹೆಸರಾಗಿದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಸೂಚಿಸಲಾದ ಸಾವನ್‌ ಹಾಗೂ ಭಾದೋನ್‌ ನಿಂದ ಈ ಶಬ್ಧ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾವನ್‌ ಪೆವಿಲಿಯನ್‌ ಎರಡೂ ಕಡೆ ಕ್ಯಾಂಡಲ್‌ ಬೆಳಗಿಸುವ ಸೌಲಭ್ಯ ಒಳಗೊಂಡಿದ್ದು, ವಿಶೇಷ ದಿನಗಳಲ್ಲಿ ಇದು ಆಕರ್ಷಕ ನೋಟವನ್ನು ನೀಡುತ್ತದೆ.

ಮೋತಿ ಮಹಲ್‌, ಹರಾ ಮಹಲ್‌, ಜಫರ್‌ ಎನ್‌ ಮಹಲ್‌ ಮುಂತಾದವು ಕೂಡ ಹಯಾತ್‌ ಭಕ್ಷ ಬಾಗ್‌ನ ಇತರೆ ಭಾಗಗಳಾಗಿವೆ. ಸಿಪಾಯಿ ದಂಗೆ ಕಾಲದಲ್ಲಿ ಇವೆಲ್ಲಾ ತೆರವುಗೊಂಡಿವೆ. ಇದಲ್ಲದೇ ಇಲ್ಲಿನ ಕೆಂಪು ಕೋಟೆಯ ಇತರೆ ಆಕರ್ಷಣೆಗಳು ನಕ್ಕರ್‌ ಖಾನಾ, ದೀವಾನ್‌ ಐ ಆಮ್‌, ದೀವಾನ್‌ ಐ ಖಾಸ್‌, ರಂಗ್‌ ಮಹಲ್‌, ಖಾಸ್‌ ಮಹಲ್‌, ಮುಮ್ತಾಜ್‌ ಮಹಲ್‌ ಮತ್ತಿತರರವು.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat