Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ದೆಹಲಿ ಮೆಟ್ರೊ

ದೆಹಲಿ ಮೆಟ್ರೊ, ದೆಹಲಿ

7

ಸಾರ್ವಜನಿಕರಿಗೆ ಸುಲಭ ಹಾಗೂ ಉತ್ತಮವಾದ ಸಾರಿಗೆ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸೇರಿ ಆಧುನಿಕ ತಂತ್ರಜ್ಞಾನದ ಮಾರ್ಗವನ್ನು ಹಮ್ಮಿಕೊಂಡಿರುವ ಫಲಶ್ರುತಿಯೇ ದೆಹಲಿಯ ಮೆಟ್ರೊ ರೈಲು. ಜನಜಂಗುಳಿಯಿಂದ ಗಿಜುಗುಡುತ್ತಿರುವ ದೆಹಲಿಯ ಬೀದಿಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಆಧುನಿಕ ರೈಲು ಮಾರ್ಗವನ್ನು ಅಳವಡಿಸಲಾಗಿದೆ.

1998 ರಲ್ಲೇ ದೆಹಲಿ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಆರಂಭವಾದರೂ 2002 ರಲ್ಲಿ ರೆಡ್ ಲೈನ್ ರೈಲು ಪ್ರಯಾಣಕ್ಕೆ ಮಾರ್ಗ ತೆರೆಯಲ್ಪಟ್ಟಿತು. ನಂತರ ಕ್ರಮೇಣವಾಗಿ ಯೆಲ್ಲೋ ಲೈನ್, ಬ್ಲೂ ಲೈನ್, ಗ್ರೀನ್ ಲೈನ್ ಹಾಗೂ ವೈಟ್ ಲೈನ್ ಮಾರ್ಗಗಳು ಸಂಪರ್ಕ ಪಡೆದುಕೊಂಡವು.

ಅಕ್ಷರ ಜ್ಙಾನವಿಲ್ಲದವರೂ ಕೂಡ ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡುವಂತೆ ತಂತ್ರಜ್ಙಾನ ಬಳಕೆ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಟಿಕೇಟ್ ಖರೀದಿಗೆ ಅಳವಡಿಸಿರುವುದರಿಂದ ಪ್ರಯಾಣದ ಆರಂಭ ಹಾಗೂ ಅಂತ್ಯದ ವರೆಗೆ ಎಲ್ಲಿಗೆ ಬೇಕು ಅಲ್ಲಿಗೆ ರೀಚಾರ್ಜ್ ಮಾಡಿಸಿಕೊಂಡು ಪ್ರಯಾಣಿಸಬಹುದಾಗಿದೆ. ರೈಲಿನ ಒಳಭಾಗದಲ್ಲಿ ಎಲ್ಲಾ ಮಾಹಿತಿಗಳು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೇಳಲಾಗುತ್ತದೆ.

ವಿಶ್ವದ ಅತ್ಯುತ್ತಮ ಮೆಟ್ರೊ ರೈಲುಗಳಲ್ಲೊಂದಾಗಿರುವ ದೆಹಲಿಯ ಈ ಮೆಟ್ರೊ ರೈಲಿನಲ್ಲಿ ಆಧುನಿಕ ರೈಲು ನಿರ್ವಹಣೆ ಪದ್ದತಿಯ ಅಳವಡಿಕೆಯಿಂದಾಗಿ ಮಾರ್ಗದ ಪ್ರಯಾಣವು ಸಾರ್ವಜನಿಕರಿಗೆ ನಿರ್ವಹಿಸಲು ಸುಲಭವಾಗಿದೆ. ರೈಲಿನ ಒಳಭಾಗವು ಅತ್ಯಂತ ಆಧುನಿಕ ಹಾಗೂ ಐಶಾರಾಮಿಯಾಗಿದ್ದು ಹವಾನಿಯಂತ್ರಿತ ಕೋಚ್ ಗಳಲ್ಲಿ ಪ್ರಯಾಣಿಸುವುದು ಹಾಗೂ ಆಟೋಮೆಟಿಕ್ ಫೇರ್ ಕಲೆಕ್ಷನ್ ಪದ್ದತಿಯಿಂದಾಗಿ ಪ್ರಯಾಣಿಕರಿಗೆ ಟಿಕೇಟ್ ಖರೀದಿ ಬಹಳ ಸುಲಭವಾಗಿದೆ. ಮೆಟ್ರೊ ನಿಲ್ದಾಣದಲ್ಲಿ  ಆಗಮನ/ನಿರ್ಗಮನಕ್ಕೆಂದು ಫ್ಲ್ಯಾಪ್ ಡೋರುಳಿದ್ದು, ನಿಲ್ದಾಣದ ಎರಡೂ ಭಾಗಗಳಲ್ಲಿರುವ ಎಸ್ಕಲೇಟರ್ಸ್  ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಿವೆ.

ದೆಹಲಿಯ ನಗರ ಸಾರಿಗೆ ವ್ಯವಸ್ಥೆ ತನ್ನದೇ ಆದ ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ನೀವು ಈ ರಾಜಧಾನಿಗೆ ಭೇಟಿ ನೀಡಿದ್ದಲ್ಲಿ ದೆಹಲಿ ಮೆಟ್ರೋದಲ್ಲಿ ಒಮ್ಮೆ ಪ್ರಯಾಣ ಮಾಡಿ ಸ್ವಂತ ಅನುಭವ ಪಡೆದುಕೊಳ್ಳುವುದನ್ನು ಮರೆಯಬೇಡಿ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun