Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಬಾಬಾ ಖರಕ್ ಸಿಂಗ್ ಮಾರ್ಗ್‌

ಬಾಬಾ ಖರಕ್ ಸಿಂಗ್ ಮಾರ್ಗ್‌, ದೆಹಲಿ

3

ದೆಹಲಿಯ ಅತ್ಯಂತ ಬ್ಯುಸಿಯಾಗಿರುವ ರಸ್ತೆಯೆಂದರೆ ಬಾಬಾ ಖರಕ್ ಸಿಂಗ್ ಮಾರ್ಗ್‌. ಇಲ್ಲಿರುವ ಎಂಪೋರಿಯಂ ಭಾರತದಲ್ಲೇ ತುಂಬ ಪ್ರಸಿದ್ಧ. ದೇಶದ ಎ‌ಲ್ಲಾ ಮೂಲೆಗಳ ಕರಕುಶಲ ಸಾಮಗ್ರಿಗಳೂ ಇಲ್ಲಿನ ದಿ ಸ್ಟೇಟ್ ಎಂಪೋರಿಯಾ ಕಾಂಪ್ಲೆಕ್ಸಿನಲ್ಲಿ ಕಾಣಸಿಗುತ್ತದೆ.

ಝೂನ್‌ ಎಂಬ ಕಾಶ್ಮೀರಿ ಎಂಪೋರಿಯಂ ಜನಪ್ರಿಯವಾಗಿರುವುದು, ಅಲ್ಲಿ ಮಾರುವ ವಿವಿಧ ಶ್ರೇಣಿಯ ಕಾಶ್ಮೀರಿ ಶಾಲುಗಳಿಂದಾಗಿ. ತಮಿಳುನಾಡು ಎಂಪೋರಿಯಂನಲ್ಲಿ ಪೂಂಪುಹರ ಎಂಬ ಹಿತ್ತಾಳೆಯ ಲ್ಯಾಂಪ್ ಮತ್ತು ಚಿಹ್ನೆಗಳು ಸಿಗುತ್ತವೆ. ಇನ್ನು ಕರ್ನಾಟಕದ ಕಾವೇರಿ ಎಂಪೋರಿಯಂನಲ್ಲಿ ರೇಶ್ಮೆಯ ಬಟ್ಟೆಗಳು ಲಭ್ಯ. ಬಿಹಾರಿ ಎಂಪೋರಿಯಂ ಆಗಿರುವ ಆಮ್ರಪಾಲಿಯಲ್ಲಿ ಮಧುಬನಿ ಪೇಂಟಿಂಗ್‌ಗಳನ್ನು ನೀವು ನೋಡಬಹುದು. ರಾಜಸ್ಥಾನಿ ಕರಕುಶಲ ಸಾಮಗ್ರಿಗಳಿಗಾಗಿ ರಾಜಸ್ತಲಿಯನ್ನು ಭೇಟಿ ಮಾಡಿ.

ಗುಜರಾತ್‌ನ ಗುರ್ಜರಿಯಲ್ಲಿ ಮುದ್ರಿತ ಕಾಟನ್‌ ಬಟ್ಟೆಗಳು, ಆಭರಣಗಳು ಮತ್ತು ಗಾಜಿನ ಚಿತ್ತಾರಗಳು ಲಭ್ಯ. ಮಂಜೂಷಾ, ಇದು ಪಶ್ಚಿಮ ಬಂಗಾಳದ ಕರಕುಶಲ ಮಳಿಗೆ. ಇಲ್ಲಿ ಸಿಲ್ಕ್ ಮತ್ತು ಕಾಟನ್‌ ಸೀರೆಗಳು ಲಭ್ಯ. ಹಾಗೇ ನೀವು ಇಲ್ಲಿ ರುಚಿಕರ ಚಹಾವನ್ನೂ ಸವಿಯಬಹುದು. ಮಧ್ಯಪ್ರದೇಶದ ಮೃಗಯಾನಿ ಕರಕುಶಲ ಮಳಿಗೆಯಲ್ಲಿ ಮರದ ಸುಂದರ ಕೆತ್ತನೆಗಳಿರುವ ಸಾಮಗ್ರಿಗಳನ್ನು ನೋಡಬಹುದು, ಕೊಳ್ಳಬಹುದು. ದೊಡ್ಡ ಮರದಂತಹ ಕರಕುಶಲ ಮನೆಯಲ್ಲಿ ಬಿದಿರು ಮತ್ತು ಬೆತ್ತದಿಂದ ಮಾಡಲಾದ ನಿಮ್ಮ ಮನೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದನ್ನು ಪುರ್ಬಶಾ ಎಂದು ಕರೆಯಲಾಗಿದ್ದು, ತ್ರಿಪುರಾದ ಕರಕುಶಲ ಮಳಿಗೆಯಿದು.

ಎಂಪೋರಿಯಾ ಕಾಂಪ್ಲೆಕ್ಸಿನ ಸಮೀಪದಲ್ಲೇ ಇರುವ ಇನ್ನೊಂದು ಭೇಟಿ ಮಾಡಲೇಬೇಕಾದ ತಾಣವೆಂದರೆ ರಾಜೀವ್ ಗಾಂಧಿ ಹ್ಯಾಂಡಿಕ್ರಾಫ್ಟ್‌ ಭವನ. ಇಲ್ಲಿ ನೀವು ಪುಸ್ತಕಗಳು, ಕಾಗದದ ಉತ್ಪನ್ನಗಳು ಮತ್ತು ಗ್ರಾಮೀಣ ಕರಕುಶಲ ಸಾಮಗ್ರಿಗಳನ್ನು ಖರೀದಿಸಬಹುದು.

ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿರುವ ಹನುಮಾನ್ ಮಂದಿರ‍್ ಇನ್ನೊಂದು ಆಕರ್ಷಕ ತಾಣ. ದೇಶದಲ್ಲೇ ಅತ್ಯಂತ ಹಳೆಯ ದೇವಸ್ಥಾನಗಳಲ್ಲೊಂದು ಈ ಮಂದಿರ. ಈ ದೇವಸ್ಥಾನದ ಮುಖ್ಯ ದೇವರು ಹನುಮಂತ. ಮಂಗಳವಾರ ಮತ್ತು ಶನಿವಾರಗಳಂದು ದೇವಸ್ಥಾನದಲ್ಲಿ ಭಕ್ತರು ತುಂಬಿತುಳುಕುತ್ತಿರುತ್ತಾರೆ.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed