ತಿರುಗಾಡಲು ದಾರ್ಜೀಲಿಂಗ ನ ಟೀ ಎಸ್ಟೇಟ್ ಗಳು ಒಳ್ಳೆಯ ಮಾರ್ಗ. ವಿಶ್ವದಲ್ಲೇ ಅತ್ಯುತ್ತಮವಾಗಿರುವ ಕೆಲವೊಂದು ಬಗೆಯ ಟೀಗಳನ್ನು ಇಲ್ಲಿ ಪಡೆಯಬಹುದಾಗಿದೆ. ದಾರ್ಜೀಲಿಂಗ ನಲ್ಲಿರುವ ಹೆಚ್ಚಿನ ಟೀ ಎಸ್ಟೇಟ್ ಗಳು ಟೀಯನ್ನು ರಫ್ತು ಮಾಡುತ್ತವೆ. ಹ್ಯಾಪಿ ವ್ಯಾಲಿ ಟೀ ಎಸ್ಟೇಟ್ ಪ್ರವಾಸಿಗರಿಗೆ ಮುಕ್ತವಾಗಿದ್ದು, ಇಲ್ಲಿ ತಿರುಗಾಡಿ ಅಲ್ಲಿನ ವಿವಿಧ ಸೌಲಭ್ಯಗಳನ್ನು ವೀಕ್ಷಿಸಬಹುದು. ಟೀ ಎಸ್ಟೇಟ್ ನ್ನು ತಿರುಗಾಡಿಸಲು ಕೆಲವು ಮಂದಿ ಸ್ವಲ್ಪ ಟಿಪ್ಸ್ ಕೇಳಿದರೂ ಎಸ್ಟೇಟ್ ನ್ನು ಸುತ್ತಿದ ಬಳಿಕ ಅದು ದುಬಾರಿಯೆಂದು ನಿಮಗನಿಸದು!


Click it and Unblock the Notifications