ನಗರದಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಅಮೋಘವಾದ ರೋಪ್ ವೇ ಪ್ರವಾಸಿಗರನ್ನು ದಾರ್ಜೀಲಿಂಗ ನಿಂದ ರನ್ಗಿತ್ ಪರ್ವತಕ್ಕೆ ತಲುಪಿಸುತ್ತದೆ. ರೋಪ್ ವೇಯ ಇನ್ನೊಂದು ಬದಿಯಲ್ಲಿ ಸಿಂಗ್ಲಾ ಬಜಾರ್ ಇದೆ. ಮೋಡಗಳ ಮಧ್ಯೆ ಕೆಳಗಿರುವ ಟೀ ಗಾರ್ಡನ್ ಗಳನ್ನು ವೀಕ್ಷಿಸುತ್ತಾ ರೋಪ್ ವೇಯಲ್ಲಿ ಸಾಗುವುದೇ ಒಂದು ಅದ್ಭುತ ಅನುಭವ. ಭಾರತದ ಅತ್ಯಂತ ಹಳೆಯ ರೋಪ್ ವೇಯಾಗಿರುವ ಕೇಬಲ್ ಕಾರ್ ನಲ್ಲಿ ಒಂದು ಸುತ್ತು ಹೋಗದಿದ್ದರೆ ದಾರ್ಜೀಲಿಂಗ ಪ್ರಯಾಣ ಅಪೂರ್ಣ.


Click it and Unblock the Notifications