ಪಳಯಾರೈ ಚೋಳರ ಕಾಲದಲ್ಲಿ ರಾಜಧಾನಿಯಾಗಿತ್ತು. ಈ ಪಟ್ಟಣದಲ್ಲಿ ಚೋಳರ ಕಾಲದ ಹಲವು ದೇವಾಲಯಗಳಿವೆ. ಅವುಗಳಲ್ಲಿ ಪಳಯಾರೈ ಸೋಮೇಶ್ವರ ದೇವಾಲಯ ಅಥವ ಪಳಯಾರೈ ವಡತಲೈ ದೇವಾಲಯವು ಪ್ರಮುಖವಾದುದು. ಇದು ಕುಂಭಕೋಣಂನಿಂದ 6 ಕಿ.ಮೀ ಮತ್ತು ದಾರಾಸುರಂನಿಂದ 3 ಕಿಮೀ ದೂರದಲ್ಲಿದೆ. ಇದೊಂದು ಸಂದರ್ಶಿಸಲೇಬೇಕಾದ ಯಾತ್ರಾಸ್ಥಳ. ಇದು ದಾರಾಸುರಂನ ರೈಲ್ವೇ ನಿಲ್ದಾಣದ ಹತ್ತಿರವಿದೆ. ಪಳಯಾರೈನಲ್ಲಿ ಮೆಟ್ರಲೈ, ಕೇಳ್ತಲೈ, ತೇನತಲೈ ಮತ್ತು ವಡತಲೈ ದೇಗುಲಗಳಿವೆ. ಇವುಗಳಲ್ಲಿ ವಡತಲೈ ಹೆಚ್ಚು ಪ್ರಸಿದ್ಧವಾದದ್ದು. ಇವೆಲ್ಲವೂ ಬಹಳ ಸುಂದರವಾದ ದೇವಾಲಯಗಳು.


Click it and Unblock the Notifications