ದಮನ್ ಕೋಟೆಯ ಹೊರಗೆ ಮತ್ತು ಫುಟ್ ಬಾಲ್ ಮೈದಾನದ ಹತ್ತಿರ ಈ ಚರ್ಚ್ ಇದೆ.ಇದು ಪೊರ್ಚುಗೇಸರಿಂದ ಕಟ್ಟಲಾದ ಅತಿ ಹಳೆಯ ಚರ್ಚ್. 1510 ರಲ್ಲಿ ಬಿಜಾಪುರ ಸುಲ್ತಾನರನ್ನು ಸೋಲಿಸಿದ ಪೋರ್ಚುಗೀಸರ ಕಮಾಂಡರ್ ಅಲ್ಫೊನ್ಸೊ ದಿ ಆಲ್ಬುಕರ್ಕ್ ಕಾಲದ ಇತಿಹಾಸವಿದೆ.
ಲಿಸ್ಬನ್ ನಲ್ಲಿ ಹುಟ್ಟಿದ ಮತ್ತು ದಮನ್ ನಲ್ಲಿ ಸತ್ತ 17 ಶತಮಾನದ ಪೋರ್ಚುಗೀಸ್ ಗವರ್ನರ್ ಅಗೊಸ್ಟಿನೊ ಕ್ಸೇವಿಯರ್ ಡಿ ಸಿಲ್ವ ಎಂಬುವವನು ಕಟ್ಟಿದ ಎನ್ನಲಾಗಿದೆ.
ವಿವಿದ ಬಣ್ಣದ ಗುಲಾಬಿ ಎಸಳುಗಳಿಂದ ಈ ಚರ್ಚ್ ಅನ್ನು ಅಲಂಕರಿಸಲಾಗಿದೆ. ಚರ್ಚ್ ನ ಗೋಡೆಯಲ್ಲಿರುವ ಪೇಂಟಿಂಗ್ ಗಳು ಧಾರ್ಮಿಕ ಸಂತರ ಜೀವಂತಿಕೆಯನ್ನು ತೋರಿಸುತ್ತವೆ. ಚಿನ್ನದ ಪ್ಲೇಟ್ ನಿಂದ ಕುಡಿದ ಚರ್ಚ್ ನ ಬಲಿಪೀಟ ಸುಂದರವಾಗಿದೆ.
ಚಿನ್ನ ಲೇಪಿತ ಮರದ ಕೆಲಸ ಮತ್ತು ವಿವಿಧ ಬಣ್ಣಗಳಿಂದ ಕೂಡಿದ ಚರ್ಚ ನ ಜೀಸಸ್ ಕ್ರಿಶ್ತ್ ನ ಪೇಂಟಿಂಗ್ ಪೋರ್ಚುಗೀಸರ ಕಾಲದ್ದಾಗಿದೆ.


Click it and Unblock the Notifications