Search
 • Follow NativePlanet
Share
ಮುಖಪುಟ » ಸ್ಥಳಗಳು» ದಾದ್ರಾ ಮತ್ತು ನಗರ್ ಹವೇಲಿ

ದಾದ್ರಾ ಮತ್ತು ನಗರ್ ಹವೇಲಿ - ಸೌಂದರ್ಯದ ಭೂಮಿ

ದಾದ್ರಾ ಮತ್ತು ನಗರ್ ಹವೇಲಿ ಪಶ್ಚಿಮ ಭಾರತದ ಒಂದು ಕೇಂದ್ರಾಡಳಿತ ಪ್ರದೇಶ ಮತ್ತು ಅದರ ರಾಜಧಾನಿ ಸಿಲ್ವಸ್ಸಾ. ನಗರ್ ಹವೇಲಿಯು ಮಹಾರಾಷ್ಟ್ರ ಮತ್ತು ಗುಜರಾತ್ ನ ಮಧ್ಯದಲ್ಲಿ ಬರುತ್ತದೆ. ದಾದ್ರಾ, ನಗರ್ ಹವೆಲಿಯಿಂದ ಸ್ವಲ್ಪ ದೂರದಲ್ಲಿದೆ ಇದು ಗುಜರಾತ್ ಭಾಗದ ನಗರ್ ಹವೆಲಿಯಿಂದ ಉತ್ತರದ ಭಾಗದಲ್ಲಿದೆ. ದಮನ್ ಗಂಗಾ ನದಿಯು ಇಲ್ಲಿ ಹರಿದು ಪಶ್ಚಿಮ ಘಟ್ಟಗಳ ಮೂಲಕ ಪೂರ್ವಕ್ಕೆ ಸೇರುತ್ತದೆ. ಜೊತೆಗೆ ಅರಬ್ಭಿ ಸಮುದ್ರವೂ ಗುಜರಾತ್ ನ ಪಶ್ಚಿಮ ಭಾಗದಲ್ಲಿ ಹರಿದರೂ ದಾದ್ರಾ ಮತ್ತು ನಗರ್ ಹವೇಲಿ ಜಲಪಾತ್ರ ಪ್ರದೇಶವಾಗಿದೆ.

1783 ರಿಂದ 1785 ರಲ್ಲಿ ಪೋರ್ಚುಗೀಸರು ಇದನ್ನು ವಶಪಡಿಸಿಕೊಳ್ಳುವವರೆಗೆ ಇದು ಮರಾಠರ ಆಳ್ವಿಕೆಯಲ್ಲಿತ್ತು. 150 ವರ್ಷ ಆಳಿದ ಪೋರ್ಚುಗೀಸರ ಹಿಡಿತದಿಂದ 1954 ರಲ್ಲಿ ಭಾರತೀಯ ರಾಷ್ಟ್ರೀಯತಾವಾದಿ ಸ್ವಯಂ ಸೇವಕರು ಒತ್ತಾಯಪೂರ್ವಕವಾಗಿ ವಶಪಡಿಸಿಕೊಂಡರು. ನಂತರ 1961 ರಲ್ಲಿ ಇದು ಕೇಂದ್ರಾಡಳಿತ ಪ್ರದೇಶವಾಯಿತು. ಆದಾಗ್ಯೂ ಪೊರ್ಚುಗೀಸರ ಪ್ರಭಾವ ಇಲ್ಲಿ ಜೀವಂತವಾಗಿದ್ದು ಪ್ರತಿವರ್ಷ ನೈಸರ್ಗಿಕ ಸೌದರ್ಯವನ್ನು ಸವಿಯಲು ಇಲ್ಲಿ ಸೇರುವ ಜನಜಂಗುಳಿಯ ಪ್ರವಾಸಿಗರಿಗೆ ಇದೊಂದು ಆಕರ್ಷಣೀಯ ಸ್ಥಳವಾಗಿದೆ.

491 ಸ್ಕ್ವಯರ್ ಕಿ ಮೀ ನಷ್ಟು ವ್ಯಾಪ್ತಿ ಹೊಂದಿರುವ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಸಾಕಷ್ಟು ಬುಡಕಟ್ಟು ಜನಾಂಗವಾದ ವರ್ಲಿ, ಡುಬ್ಲ, ಧೋದಿಯ ಮತ್ತು ಕೊಂಕಣ್ ದವರು ಬೀಡುಬಿಟ್ಟಿದ್ದಾರೆ. ಸುಮಾರು ಶೇಖಡ 40 ರಷ್ಟು ಭಾಗ ದಟ್ಟ ಕಾಡಿನಿಂದ ಕೂಡಿದ್ದು ಇದು ಈ ಬುಡಕಟ್ಟು ಜನಾಂಗದವರ ವಾಸಸ್ಥಳವಾಗಿದೆ.  

ದಾದ್ರಾ ಮತ್ತು ನಗರ್ ಹವೇಲಿಯ ಆಕರ್ಷಣೆಗಳು :

ಮೇಲೆ ಹೇಳಿದಂತೆ ದಾದ್ರಾ ಮತ್ತು ನಗರ್ ಹವೇಲಿ 150 ವರ್ಷ ಪೊರ್ಚಗೀಸರ ಆಳ್ವಿಕೆಯಲ್ಲಿತ್ತು. ಅಲ್ಲಿನ ವಾಸ್ತುಶಿಲ್ಪ, ಆಹಾರ ಪದ್ಧತಿ ಮತ್ತು ಜೀವನ ಶೈಲಿಗಳಲ್ಲಿ ಪೋರ್ಚುಗೀಸರ ಗುರುತ(ಛಾಪನ್ನು)ನ್ನು ಕಾಣಬಹುದು. ಈ ಪ್ರದೇಶದ ಮುಖ್ಯ ಆಕರ್ಷಣೆಗಳಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚ್ ಕೂಡ ಒಂದು. ಆದರೆ ಇಂದು ಇಲ್ಲಿ ಕೂಡ  ಹಿಂದೂ ಮತ್ತು ಅನೇಕ ಬ್ರಾಹ್ಮಣ ದೇವಸ್ಥಾನಗಳು ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ. ಹೆಚ್ಚಿನ ಜನರು ಸಿಲ್ವಸ್ಸಾದಲ್ಲಿ ತಂಗಲು ಆದ್ಯತೆ ನೀಡುತ್ತಾರೆ, ಏಕೆಂದರೆ ಇದು ರೈಲು, ರಸ್ತೆ  ಮತ್ತು ವಾಯು ಮಾರ್ಗಗಳಿಗೆ ಸುಲಭವಾಗಿ ಸಂಪರ್ಕವಾಗುವಂತಿದೆ ಮತ್ತು ಇದು ದೇವಸ್ಥಾನ ಮತ್ತು ಚರ್ಚ್ ಗಳಲ್ಲದೆ ಅನೇಕ ಆಕರ್ಷಣೀಯ ಸ್ಥಳಗಳಿಗೆ ಹತ್ತಿರವಾಗಿದೆ. ರಾಜಧಾನಿಯಲ್ಲಿರುವ ಬುಡಕಟ್ಟು ಜನರ ಸಾಂಸ್ಕೃತಿಕ ವಸ್ತು ಸಂಗರಹಾಲಯದಲ್ಲಿ  ಮುಖವಾಡಗಳು, ಸಂಗೀತ ಉಪಕರಣಗಳು, ಮೀನುಗಾರಿಕಾ ವಸ್ತುಗಳು, ಪ್ರತಿಮೆಗಳನ್ನು ಕಾಣಬಹುದು.

ಸಿಲ್ವಸ್ಸಾದಿಂದ 20 ಕಿ.ಮೀ ದೂರದಲ್ಲಿರುವ ಖಾನ್ವೆಲ್ ನಲ್ಲಿ ತೋಟದ ನಡುವೆ ಗೃಹಗಳಿರುವ, ಸೊಂಪಾದ ಹಸಿರು ಬೆಟ್ಟಗಳು ಮತ್ತು ಹುಲ್ಲುಗಾವಳುಗಳಿರುವ ಪ್ರಶಾಂತವಾದ ಭೂಮಿ ಹೊಂದಿರುವ  ಸ್ಥಳವಿದೆ. ಸಿಲ್ವಸ್ಸ್ಸಾದಿಂದ 5 ಕಿ.ಮೀ ದೂರದಲ್ಲಿರುವ ವಂಗಾಂಗ ಲೇಕ್ ಸುಂದರ ಉದ್ಯಾನವನ ಹೊಂದಿರುವ ಸ್ಥಳವಾಗಿದೆ. ಖಾನ್ವಾಲ್ ನಿಂದ 20 ಕಿ.ಮೀ ಡ್ರೈವ್ ಮಾಡಿದರೆ ದಮನ್ ಗಂಗಾ ನದಿಗೆ ಕಟ್ಟಲಾದ ಮಧುಬನ್ ಆಣೆಕಟ್ಟಿನ ಸುಂದರ ದೃಶ್ಯವನ್ನು ದುಧ್ನಿ ಯಲ್ಲಿ ಕಾಣಬಹುದು. ಸುಂದರ ಉದ್ಯಾನವನ, ಜಲಪಾತ, ಕಲ್ಲಿನ ಗೋಡೆಗಳು, ಹುಲ್ಲುಗಾವಲುಗಲನ್ನು ಒಳಗೊಂಡಿರುವ ಹಿರ್ವ ವ್ಯಾನ್ ಎಂಬ ಸ್ಥಳಕ್ಕು ಕೂಡ ಭೇಟಿ ನೀಡಬಹುದು. ಸಿಲ್ವಸ್ಸಾದಲ್ಲಿ ಹೆಬ್ಬಾವುಗಳು, ಮೊಸಳೆಗಳು, ಮಂಗಗಳು ಮತ್ತು ಹಕ್ಕಿಗಳನ್ನು ಒಳಗೊಂಡಿರುವ ಸಣ್ಣ ಪ್ರಾಣಿ ಸಂಗ್ರಹಾಲಯವೂ ಕೂಡ ಇದೆ.

ದಾದ್ರಾ ಮತ್ತು ನಗರ್ ಹವೇಲಿಯು ವನ್ಯಜೀವಿ ಲೋಕದಲ್ಲಿ ಉತ್ಸಾಹವಿರುವವರಿಗೆ ಅಚ್ಚುಕಟ್ಟಾದ ಸ್ಥಳವಾಗಿದೆ. ನಿಮಗಿಷ್ಟವಿದ್ದಲ್ಲಿ ವಸೋನ ಸಿಂಹ ಸಫಾರಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಗುಜರಾತ್ ನ ವಿಶೇಷವಾದ ಗೀರ್ ಅಭಯಾರಣ್ಯದಿಂದ ಸಿಂಹಗಳನ್ನು ಇಲ್ಲಿ ತರಲಾಗಿದೆ. ಹಲವಾರು ಜಿಂಕೆ ತಳಿಗಳನ್ನು ಮತ್ತು ಇತರ ಪ್ರಾಣಿಗಳನ್ನು ಹೊಂದಿರುವ ಸತ್ಯಮಲಿಯ ಜಿಂಕೆ ಪಾರ್ಕ್ ಕೂಡ ನೋಡಬಹುದಾದ ಇನ್ನೊಂದು ಸ್ಥಳ. ಸಿಲ್ವಸ್ಸಾದಿಂದ 40 ಕಿ.ಮೀ ಇರುವ ವಿಶಿಷ್ಟ ಬುಡಕಟ್ಟು ಗ್ರಾಮವಾದ ಕೌಂಚ ಕೂಡ ನೋಡಬಹುದಾದ ಸ್ಥಳ.

ದಾದ್ರಾ ಮತ್ತು ನಗರ್ ಹವೇಲಿ ಸ್ಥಳಗಳು

 • ಸಿಲ್ವಾಸ್ಸಾ 25
 • ಸಿಲ್ವಾಸ್ಸಾ 25
 • ಸಿಲ್ವಾಸ್ಸಾ 25

ದಾದ್ರಾ ಮತ್ತು ನಗರ್ ಹವೇಲಿ ಹವಾಮಾನ

ದಾದ್ರಾ ಮತ್ತು ನಗರ್ ಹವೇಲಿ
28oC / 83oF
 • Partly cloudy
 • Wind: SSW 10 km/h

ಉತ್ತಮ ಸಮಯ ದಾದ್ರಾ ಮತ್ತು ನಗರ್ ಹವೇಲಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec
One Way
Return
From (Departure City)
To (Destination City)
Depart On
27 Nov,Fri
Return On
28 Nov,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Nov,Fri
Check Out
28 Nov,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Nov,Fri
Return On
28 Nov,Sat
 • Today
  ದಾದ್ರಾ ಮತ್ತು ನಗರ್ ಹವೇಲಿ
  28 OC
  83 OF
  UV Index: 7
  Partly cloudy
 • Tomorrow
  ದಾದ್ರಾ ಮತ್ತು ನಗರ್ ಹವೇಲಿ
  27 OC
  80 OF
  UV Index: 7
  Partly cloudy
 • Day After
  ದಾದ್ರಾ ಮತ್ತು ನಗರ್ ಹವೇಲಿ
  27 OC
  81 OF
  UV Index: 7
  Partly cloudy