ನೀಲಗಿರಿಯಲ್ಲಿರುವ ಮೂರನೇ ಅತೀ ದೊಡ್ಡ ಜಲಪಾತ ಕ್ಯಾಟರಿ ಫಾಲ್ಸ್. ಕ್ಯಾಟರಿ ಹೈಡ್ರೋಎಲೆಕ್ಟ್ರಿಕ್ ವ್ಯವಸ್ಥೆ ಹೊಂದಿರುವ ಇದು ದೇಶದ ಮೊದಲ ಹೈಡ್ರೋಎಲೆಕ್ಟ್ರಿಕ್ ವಿದ್ಯುತ್ ಉತ್ಪಾದನಾ ಘಟಕ. ಕ್ಯಾಟರಿ ಜಲಪಾತ 180 ಮೀಟರ್ ಎತ್ತರದಿಂದ ಧುಮುಕುತ್ತದೆ. ಇದೆ ಕಣ್ಣೂರಿನ ಮಧ್ಯಭಾಗದಲ್ಲಿರುವ ಕುಂಧಾ ರಸ್ತೆಯಿಂದ 10 ಕಿ.ಮೀ. ದೂರದಲ್ಲಿದೆ. ಕ್ಯಾಟರಿ ಫಾಲ್ಸ್ ನಲ್ಲಿ ಧುಮುಕುವ ನೀರಿನಿಂದ ಮೆಕ್ಯಾನಿಕಲ್ ಶಕ್ತಿ ಬಳಸಿ 1000 ಕಿ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತದೆ.
ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ನೂರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಲಾಸ್ ಫಾಲ್ಸ್ ಬಳಿಯಿರುವ ಕ್ಯಾಟರಿ ಜಲಪಾತ ಕುಣ್ಣೂರಿಗೆ ಹತ್ತಿರದಲ್ಲೇ ಇದೆ. ಮಳೆಗಾಲದಲ್ಲಿ ಭರ್ತಿಯಾಗಿ ಗಿರಿ ತುದಿಯಿಂದ ಧುಮ್ಮುಕ್ಕುವ ಜಲಪಾತವನ್ನು ನೋಡುವುದು ಬಲು ಚೆಂದ. ಆಗಸದೊಂದಿಗೆ ಭೂಮಿಯ ಬೆಸುಗೆ ಮಾಡುವಂತಿರುವ ಜಲಪಾತದ ಎತ್ತರ ಮತ್ತು ಸುತ್ತಲಿನ ಪ್ರದೇಶದ ಸೌಂದರ್ಯ ಪ್ರವಾಸಿಗರನ್ನು ಸೆಳೆಯುವಂತೆ ಮಾಡುತ್ತದೆ.


Click it and Unblock the Notifications