ಈ ಜಾಗಕ್ಕೆ ದಟ್ಟವಾದ ಹಸಿರಿನಿಂದ ಕೂಡಿದ ಕಾಡಿನ ಮುಖಾಂತರ ಹೋಗಬೇಕು. ಇದನ್ನು ಚಾರಣದ ಮುಖಾಂತರ ತಲುಪುವುದು ಕಷ್ಟಸಾಧ್ಯ. ಕುಣ್ಣೂರು ಗಿರಿಧಾಮವನ್ನು ಈ ಕಣಿವೆ ಸುತ್ತವರಿದಿದ್ದು, ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಇದನ್ನು ತಲುಪಲು ಪ್ರವಾಸಿಗರು ಸ್ವಲ್ಪ ದಾರಿ ಚಾರಣ ಮಾಡಲೇಬೇಕು.
ಇಲ್ಲಿ ತಲುಪುವುದು ಏಕೆ ಕಷ್ಟಸಾಧ್ಯವೆಂದರೆ, ಯಾವುದೇ ಪ್ರಮುಖ ದಾರಿ ಇಲ್ಲವೇ ಇಲ್ಲ. ಆದರೆ, ಇಲ್ಲಿಂದ ಗಿರಿಧಾಮ ಅತ್ಯಂತ ಸುಂದರವಾಗಿ ಕಾಣುತ್ತದೆ. ಸುಂದರ ಬೆಟ್ಟಗಳು, ಹಚ್ಚುಹಸಿರು ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವೆಲ್ಲಿಂಗ್ಟನ್ ಗೋಲ್ಫ್ ಕೋರ್ಸ್ ಆಚೆಗೆ ಇರುವ ಹಿಡನ್ ಕಣಿವೆ ಚಾರಣಿಗರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಆಹ್ವಾನ ನೀಡುತ್ತಿರುತ್ತದೆ.


Click it and Unblock the Notifications