ದಕ್ಷಿಣ ಗೋವಾದಲ್ಲಿರುವ ಕ್ಲಬ್ ಮಾರ್ಗರಿಟಾ ಮತ್ತೊಂದು ಜಗಮಗಿಸುವ, ನಿಯೋನ್ ಲೈಟುಗಳಿಂದ ಕುಡಿರುವ ಆಕರ್ಷಣೀಯ ಕ್ಲಬ್. ಇಲ್ಲಿ ಅತ್ಯಾಕರ್ಷಕ ನಿಯೋನ್ ಲೈಟುಗಳ ಟೇಬಲ್ ಗಳಿದ್ದು, ವಿಶ್ವ ಖ್ಯಾತ ಡಿಜೆಗಳ ಸಂಗಿತ ಸದಾ ಹರಿಯುತ್ತಿರುತ್ತದೆ.ಪ್ರವೇಶ ಶುಲ್ಕವು ವಾರದ ದಿನಗಳಲ್ಲಿ 300 ರೂ ಆಗಿದ್ದು ವಾರಾಂತ್ಯದಂದು ೫೦೦ ರೂ ಇರುತ್ತದೆ. ನೃತ್ಯಕ್ಕಾಗಿಯೆ ಒಂದು ಅಂಗಳವಿದ್ದು ವಿವಿಧ ಬಗೆಯ ಕಾಕ್ ಟೇಲ್ ಮತ್ತು ಖಾದ್ಯಗಳು ಸಹ ದೊರೆಯುತ್ತವೆ. ಇದೊಂದು ಭೇಟಿ ನೀಡಲೆ ಬೇಕಾದ ಸ್ಥಳ ಎಂದು ಹೇಳಬಹುದು.ಇಲ್ಲಿಗೆ ತಲುಪಲು ಪಣಜಿ, ವಾಸ್ಕೊ ಮತ್ತು ಮಾರ್ಗೊದಿಂದ ಕ್ಯಾಬ್ ಗಳು ದೊರೆಯುತ್ತವೆ. ನೀವೇನಾದರು ಉತ್ತರ ಗೋವಾದಲ್ಲಿದ್ದರೆ ಕೋಲ್ವಾ ಬೀಚ್ ಗೆ ಬಂದು ಇಲ್ಲಿಗೆ ಸುಲಭವಾಗಿ ತಲುಪಬಹುದು.


Click it and Unblock the Notifications