ತುಂಗ್ನಾಥ್ ಮಂದಿರ, ಚೋಪ್ಟಾ

ಮುಖಪುಟ » ಸ್ಥಳಗಳು » ಚೋಪ್ಟಾ » ಆಕರ್ಷಣೆಗಳು » ತುಂಗ್ನಾಥ್ ಮಂದಿರ

ಪಂಚ ಕೇದಾರದ ತುಂಗ್ನಾಥ್ ಮಂದಿರವು ಜಗತ್ತಿನ ಅತಿ ಎತ್ತರದ ಶಿವನ ದೇವಾಲಯವೆಂಬ ಮೆಚ್ಚುಗೆ ಪಡೆದಿದ್ದು, ಈ ದೇವಸ್ಥಾನವು ಸಮುದ್ರ ಮಟ್ಟದಿಂದ 3680 ಮೀಟರ್ ಎತ್ತರದಲ್ಲಿ, ತುಂಗ್ನಾಥ್ ಪರ್ವತ ಶ್ರೇಣಿಯಲ್ಲಿದೆ. ಹಿಂದೂ ಮಹಾಕಾವ್ಯ ಮಹಾಭಾರತದ ಮಧ್ಯಮ ಪಾಂಡವನಾದ ಅರ್ಜುನನು ಈ ದೇವಸ್ಥಾನವನ್ನು ನಿರ್ಮಿಸಿದನೆಂದು ಹಿಂದೂ ಪುರಾಣದಲ್ಲಿ ಉಲ್ಲೇಖವಿದೆ. ತುಂಗ್ನಾಥ್ ಎಂದರೆ "ಶೃಂಗದ ದೇವ " ಎಂಬ ಅರ್ಥವನ್ನು ನೀಡುತ್ತಿದ್ದು, ಈ ದೇವಾಲಯದಲ್ಲಿ ಪೂಜಿಸಲ್ಪಡುತ್ತಿರುವ ಈಶ್ವರನ ತೋಳು ಉತ್ತರ ಭಾರತೀಯ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ಹಿಂದೂ ಪುರಾಣದ ಪ್ರಕಾರ, ಶಿವನ ವಾಹನವೆಂದು ನಂಬಲಾಗುವ ಬಸವನ(ನಂದಿ) ಒಂದು ಕಲ್ಲಿನ ಮೂರ್ತಿಯು ಈ ದೇವಾಲಯದ ಮುಖ್ಯ ಪ್ರವೇಶದ್ವಾರದಲ್ಲಿ ಶೋಭಿಸುತ್ತದೆ.

ಈ ದೇವಾಲಯದಲ್ಲಿ ಪಾಂಡವರ ವಿಗ್ರಹಗಳು ಜೊತೆಗೆ ಕಾಳ ಭೈರವ್ ಮತ್ತು ವ್ಯಾಸರಂತಹ ಜನಪ್ರಿಯ ಹಿಂದೂ ಋಷಿಗಳ ವಿಗ್ರಹಗಳನ್ನು ಕೂಡ  ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ, ವಿವಿಧ ದೇವರುಗಳ ಮತ್ತು ದೇವತೆಗಳ ಸಣ್ಣ ಗೋಪುರಗಳನ್ನು ಈ ದೇವಾಲಯದ ಸುತ್ತಲೂ ಕಾಣಬಹುದು. ಆದರೆ ಇಲ್ಲಿ ಬೀಳುವ ಭಾರಿ ಹಿಮಪಾತದಿಂದಾಗಿ ದೇವಾಲಯವು ನವೆಂಬರ್ ದಿಂದ ಮಾರ್ಚ್ ವರೆಗಿನ ಕಾಲದಲ್ಲಿ ಮುಚ್ಚಲ್ಪಟ್ಟಿರುತ್ತದೆ.

Please Wait while comments are loading...