ಮಧ್ಯಮಹೇಶ್ವರ ದೇವಸ್ಥಾನ, ಚೋಪ್ಟಾ

ಮುಖಪುಟ » ಸ್ಥಳಗಳು » ಚೋಪ್ಟಾ » ಆಕರ್ಷಣೆಗಳು » ಮಧ್ಯಮಹೇಶ್ವರ ದೇವಸ್ಥಾನ

ಚೋಪ್ಟಾದ ಮನ್ಸುನಾ ಗ್ರಾಮದಲ್ಲಿ ಸ್ಥಾಪಿತವಾಗಿರುವ ಮಧ್ಯಮಹೇಶ್ವರ ಎಂಬ ಹೆಸರಿನ ಶಿವನ ದೇವಸ್ಥಾನವು ಸಮುದ್ರ ಮಟ್ಟದಿಂದ 3497 ಮೀಟರ್ ಎತ್ತರದಲ್ಲಿದೆ. ಕೇದಾರ್ನಾಥ್, ತುಂಗ್ನಾಥ್, ರುದ್ರನಾಥ್, ಮಧ್ಯಮಹೇಶ್ವರ ಮತ್ತು ಕಲ್ಪೇಶ್ವರ ದೇವಾಲಯಗಳು ಪಂಚ ಕೇದಾರದಲ್ಲೇ ಸ್ಥಿತಗೊಂಡಿವೆ.  ಆದ್ದರಿಂದ, ಮಧ್ಯಮಹೇಶ್ವರ ದೇವಸ್ಥಾನವು ಪಂಚ ಕೇದಾರ ತೀರ್ಥ ಕ್ಷೇತ್ರಗಳಲ್ಲಿ ಚತುರ್ಥ ಸ್ಥಾನದಲ್ಲಿ ಬರುತ್ತದೆ.

ವಿಷೇಶವೆಂದರೆ ಈ ದೇವಾಲಯದಲ್ಲಿ, ಭಕ್ತರು ಶಿವನ ಉದರವನ್ನು ಪೂಜಿಸುತ್ತಾರೆ. ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಬರುವ ಪಾಂಡವರಿಂದ ಈ ದೇವಾಲಯವು ನಿರ್ಮಿತವಾಯಿತು ಎಂಬ ನಂಬಿಕೆ ಇದ್ದು, ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ತಮ್ಮ ದಾಯಾದಿಗಳಾದ ಕೌರವರನ್ನು ಕೊಂದಿದ್ದಕ್ಕಾಗಿ  ಭಗವಾನ್ ಶಿವನ ಕ್ಷಮೆ ಕೇಳಲು ಹೋದಾಗ ಕುಪಿತಗೊಂಡಿದ್ದ ಶಿವನು  'ನಂದಿ' ಯಾಗಿ ರೂಪಾಂತರಗೊಂಡು ಹಿಮಾಲಯದ ಗಡ್ವಾಲ್ ಪ್ರದೇಶದಲ್ಲಿ ಬಚ್ಚಿಟ್ಟುಕೊಂಡಿದ್ದನು. ಪಾಂಡವರು ಗುಪ್ತಕಾಶಿಯಲ್ಲಿ ನಂದಿಯನ್ನು ಕಂಡಾಗ ಬಲವಂತವಾಗಿ ಅದನ್ನು ತಡೆಯಲು ಹೋಗಿ ವಿಫಲಗೊಂಡಿದ್ದರು. ನಂತರ, ಶಿವನು ತನ್ನ ದೇಹದ ಐದು ಭಾಗಗಳನ್ನು ಐದು ವಿವಿಧ ಸ್ಥಳಗಳಲ್ಲಿ ಪ್ರತ್ಯಕ್ಷಿಸಿದನೆಂದೂ ಮಧ್ಯಮಹೇಶ್ವರದಲ್ಲಿ ಶಿವನ ಹೊಟ್ಟೆ ಪ್ರತ್ಯಕ್ಷವಾಗಿತ್ತೆಂದೂ ನಂಬಲಾಗುತ್ತಿದ್ದು ಅದು ಪ್ರತ್ಯಕ್ಷವಾದ ಸ್ಥಳದಲ್ಲೇ ಈ ದೇವಾಲಯವನ್ನು ಕಟ್ಟಲಾಗಿದೆ.

Please Wait while comments are loading...