ದತ್ತ ಮಂದಿರವು ರೆವ್ಡಂಡದಲ್ಲಿದೆ. ಇದು ಮಹಾರಾಷ್ಟ್ರದ ಜನರು ಸಾಮಾನ್ಯವಾಗಿ ಆರಾಧಿಸುವ ದತ್ತಾತ್ರೇಯ ಸ್ವಾಮಿಗಾಗಿ ಕಟ್ಟಲಾದ ದೇವಾಲಯವಾಗಿದೆ.
ನಂಬಿಕೆಗಳಂತೆ ಈ ದೇವಾಲಯವನ್ನು ಶಿವಾಜಿಯ ಆಡಳಿತ ಅವಧಿಯಲ್ಲಿ ಕಟ್ಟಲಾಯಿತಂತೆ. ಇದನ್ನು ಕಟ್ಟಲಾದ ಉದ್ದೇಶ ಶತ್ರುಗಳನ್ನು ನಿವಾರಿಸುವುದಾಗಿತ್ತು. ದತ್ತಾತ್ರೇಯ ಸ್ವಾಮಿಯ ಜನ್ಮದಿನವನ್ನು ಇಲ್ಲಿ ಶ್ರದ್ಧಾ ಭಕ್ತಿಗಳಿಂದ ಏಳು ದಿನಗಳ ಕಾಲ ಆಚರಿಸಲಾಗುತ್ತದೆ. ಆಗ ಇಲ್ಲಿನ ಸ್ಥಳೀಯ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ.
ಈ ದೇವಾಲಯವು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದ್ದು, ಅದನ್ನು 1500 ಮೆಟ್ಟಿಲು ಹತ್ತಿ ತಲುಪಬಹುದು. ಇಲ್ಲಿಂದ ಸಂಪೂರ್ಣ ಚೌಲ್ ಪ್ರಾಂತ್ಯ ಮತ್ತು ರೆವ್ಡಂಡ ಕಾಣಬಹುದು.


Click it and Unblock the Notifications