ಚೌಮು ದೇವಾಲಯ ಹಿಂದೂ ದೇವರಾದ ಶಿವನ ಆರಾಧನೆಗೆ ಮೀಸಲಾಗಿದೆ. ಇಲ್ಲಿ ವರ್ಷಪೂರ್ತಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಶಿವ ದೇವರನ್ನು ಪ್ರಾಣಿಗಳ ರಕ್ಷಕ ಎಂದು ಪೂಜಿಸಲಾಗುತ್ತದೆ ಹಾಗೂ ಘಂಟೆಗಳು ಮತ್ತು ಹಾಲನ್ನು ಕೊಡುಗೆಯಾಗಿ ನೀಡಲಾಗುತ್ತದೆ. ವಾರ್ಷಿಕವಗಿ ನಡೆಯುವ ಉತ್ತರಾಯನಿ ಮೇಳ ಇಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಡೆಸಲಾಗುತ್ತದೆ. ಚೌಮು ಜಾತ್ ಯಾತ್ರಾದಲ್ಲಿ ಪಾಲ್ಗೊಳ್ಳಲು ಇಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.


Click it and Unblock the Notifications